ಎಥ್ನಿಕ್ ಡೇನಲ್ಲಿ ಕಂಗೊಳಿಸಿದ ಕಾಲೇಜು ವಿದ್ಯಾರ್ಥಿಗಳು

srnm
ಹೆಂಗೆ ನಾವು....ಬಗೆ ಬಗೆಯ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು.
Published on

ಶಿವಮೊಗ್ಗ: ಎಸ್‌ಆರ್‌ಎನ್‌ಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಸೌಂದರ್ಯ ಪ್ರಜ್ಞೆ ಜಾಗೃತವಾಗಿ ಬಿಟ್ಟಿತ್ತು. ದಿನವೂ ಮೇಕಪ್ ಮಾಡಿಕೊಂಡು ಆಗಮಿಸುತ್ತಿದ್ದ ಅನೇಕ ವಿದ್ಯಾರ್ಥಿನಿಯರು ಎಥ್ನಿಕ್ ಡೇ ನೆಪದಲ್ಲಿ ಮೇಕಪ್‌ಗೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು.

ತಾಂತ್ರಿಕತೆಯ ಪಾಠ ಪ್ರವಚನ ನಡೆಯುತ್ತಿದ್ದ ಕಾಲೇಜು ಸಂಪೂರ್ಣ ಸಾಂಪ್ರದಾಯಿಕವಾಗಿತ್ತು. ಪಂಚೆ, ಧೋತಿ ತೊಟ್ಟ ವಿದ್ಯಾರ್ಥಿಗಳು, ಸೀರೆ ತೊಟ್ಟು, ಹೂವು ಮುಡಿದ ವಿದ್ಯಾರ್ಥಿನಿಯರು ವಿಶೇಷ ಬಗೆಯಲ್ಲಿ ಕಂಗೊಳಿಸಿದರು.
ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳು ವಿವಿಧ ಬಗೆಯ ವೇಷಭೂಷಣಗಳೊಂದಿಗೆ ಮಿಂಚಿದರು. ಕೇರಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು ಮಿಂಚಿದರು. ಯುವತಿಯರು ಓಣಂ ಸೀರೆ, ಲಂಬಾಣಿ ಉಡುಗೆ, ಇಳಕಲ್ ಸೀರೆ ತೊಟ್ಟು, ಮೈಸೂರು ಮಲ್ಲಿಗೆ ಮುಡಿಯಲ್ಲಿಟ್ಟು ಗಮನಸೆಳೆದರು. ಸರಸ್ವತಿ ಪೂಜೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಗೋಡೆ ಮೇಲೆ ಹಸೆ ಚಿತ್ತಾರ ಬರೆದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net