

College Student: ಎಂಎಸ್ಸಿ ಓದುವ ಬಯಕೆಯಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದ ಯುವತಿ ಸುತ್ತಿಟ್ಟ ಬೆಡ್ಶೀಟ್ನಲ್ಲಿ ಶವವಾಗಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವರದಿಯಾಗಿದೆ.
ಮೃತ ಯುವತಿಯನ್ನು ಅಲ್ಕ ಬಿಂದ್ (22) ಎಂದು ಗುರುತಿಸಲಾಗಿದೆ. ಓದಲು ಮನೆಬಿಟ್ಟು ಕಾಲೇಜಿಗೆ ಹೋಗುತ್ತಿದ್ದ ಈಕೆ, ಪ್ರೀತಿಯಲ್ಲಿ ಬಿದ್ದದ್ದೇ ಇಂದು ಆಕೆಯ ದುರಂತ ಅಂತ್ಯಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಪದೇ ಪದೇ ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮತ್ತು ಹಣ ಕೊಡುವಂತೆ ಡಿಮಾಂಡ್ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಆಕೆಯ ಪ್ರಿಯಕರನೇ ಯುವತಿಯನ್ನು ಬರ್ಬರವಾಗಿ ಕೊಂದಿರುವುದು ಬೆಳಕಿಗೆ ಬಂದಿದೆ.
ಮಾಹಿತಿ ಪ್ರಕಾರ, ಗುರುವಾರ (ಜು.03) ಮಿರ್ಜಾಮುರಾದ್ ಪ್ರದೇಶದ ರೂಪಾಪುರದಲ್ಲಿರುವ ವಿಧಾನ್ ಬಸೇರಾ ಧಾಬಾದ ರೂಮ್ನಲ್ಲಿ ಯುವತಿ ಅಲ್ಕ ಬಿಂದ್ ಮೃತದೇಹ ಪತ್ತೆಯಾಗಿದೆ. ದೇಹ ಪರಿಶೀಲಿಸಿದ ಪೊಲೀಸರಿಗೆ, ಆಕೆಯ ಗಂಟಲು ಸೀಳಿ ಹತ್ಯೆಗೈದಿರುವುದು ಕಂಡುಬಂದಿದೆ. ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿಟ್ಟು, ಮಂಚದಡಿಯಲ್ಲಿ ಬಚ್ಚಿಟ್ಟಿರುವುದು ಸ್ಪಷ್ಟವಾಗಿದೆ. ಬುಧವಾರ (ಜು.02) ಬೆಳಗ್ಗೆ ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿ ಕಾಣೆಯಾದ ಬಗ್ಗೆ ವರದಿಯಾದ ಕೆಲವೇ ಗಂಟೆಗಳಲ್ಲಿ ಈ ಪ್ರಕರಣ ಬಯಲಾಗಿದೆ.
ಗುರುವಾರ ಭದೋಹಿಯಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ಸಹಾಬ್ ಬಿಂದ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಖಾಕಿಯ ಬಳಿಯಿದ್ದ ಬಂದೂಕನ್ನು ಕಸಿದುಕೊಂಡು ಪೊಲೀಸರ ಗುಂಪಿನ ಮೇಲೆಯೇ ಗುಂಡು ಹಾರಿಸಲು ಯತ್ನಿಸಿದ್ದ. ಕೂಡಲೇ ಆತನ ಕಾಲಿಗೆ ಅಧಿಕಾರಿಗಳು ಫೈರ್ ಮಾಡಿದ್ದಾರೆ. ಪ್ರಸ್ತುತ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ" ಎಂದು ವಾರಣಾಸಿ ಪೊಲೀಸ್ ಉಪ ಆಯುಕ್ತ (ಡಿಸಿಪಿ) ಆಕಾಶ್ ಪಟೇಲ್ ತಿಳಿಸಿದ್ದಾರೆ.
ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿ, "2024ರಲ್ಲಿ ನಡೆದ ಸ್ನೇಹಿತರ ಮದುವೆ ಸಮಾರಂಭದಲ್ಲಿ ಯುವತಿಯನ್ನು ಭೇಟಿಯಾದೆ. ಇಬ್ಬರೂ ಪರಸ್ಪರ ಮಾತನಾಡುತ, ಪ್ರೀತಿಸಲು ಪ್ರಾರಂಭಿಸಿದ್ದೆವು. ಪ್ರೀತಿ ಸಂಬಂಧದಲ್ಲಿದ್ದ ನಡುವೆಯೇ ಅಲ್ಕ ಮದುವೆ ಆಗಬೇಕು. ಒಂದಷ್ಟು ಹಣ ಕಳಿಸು ಎಂದು ಪದೇ ಪದೇ ಒತ್ತಾಯ ಹೇರುತ್ತಿದ್ದಳು. ಇದರಿಂದ ಸಂಬಂಧ ಮುಂದುವರಿಸುವುದು ಇನ್ನಷ್ಟು ಕಷ್ಟಕರವಾಯಿತು. ಹೀಗಾಗಿ ಕೊಲೆಗೈದೆ" ಎಂದು ಪಟೇಲ್ ಹೇಳಿಕೊಂಡಿದ್ದಾನೆ,(ಏಜೆನ್ಸೀಸ್).