14 ಎಕರೆ ವಶಕ್ಕೆ ಪಡೆದ ಜಿಲ್ಲಾಧಿಕಾರಿ

dc
Published on

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನು ವಶಕ್ಕೆ ಪಡೆಯುವ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಶನಿವಾರ 14 ಎಕರೆ 15 ಗುಂಟೆ ಭೂಮಿ ವಶಕ್ಕೆ ಪಡೆದಿದ್ದಾರೆ.

ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿವುದರನ್ನು ಗುರುತಿಸಿ ಪ್ರತಿ ಮೊದಲನೇ ಮತ್ತು 3ನೇ ಶನಿವಾರ ಹಾಗೂ 2ನೇ, 4ನೇ ಶುಕ್ರವಾರದಂದು ತೆರವುಗೊಳಿಸಿ ವಶಕ್ಕೆ ಪಡೆಯುವಂತೆ ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಮತ್ತು ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯಕ್, ತಹಸೀಲ್ದರ್, ಮುಜರಾಯಿ ತಹಸೀಲ್ದರ್ ನೇತೃತ್ವದ ತಂಡ ಶನಿವಾರ ಕಾರ್ಯಾಚರಣೆ ಕೈಗೊಂಡಿತ್ತು.

ಉತ್ತರಹಳ್ಳಿಯ ಕಗ್ಗಲೀಪುರ, ಕೆಂಗೇರಿಯ ಹಲಗೇವಡೇರಹಳ್ಳಿ, ಜಿಗಣಿಯ ಕಲ್ಕೆರೆ, ಸರ್ಜಾಪುರದ ತಿಗಳಚೌಡೇನಹಳ್ಳಿ, ಜಾಲದ ಗೊಲ್ಲಹಳ್ಳಿ, ದಾಸನಪುರದ ಶಿವಪುರ ಸೇರಿದಂತೆ 16 ಗ್ರಾಮಗಳಲ್ಲಿ ಒತ್ತುವರಿಯಾಗಿದ್ದ 14 ಎಕರೆ 15 ಗಂಟೆ ಜಮೀನನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ಅಂದಾಜು 80.69 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net