ಕುಸಿದು ಬಿದ್ದ ಮನೆ ಗೋಡೆ

HUN-NOV-9-5(RATNAMMA HOUSE)
ಹುಣಸೂರು ತಾಲೂಕು ಬಿಳಿಕೆರೆಯ ದಾಸ್ತಿಕೊಳ ಬಡಾವಣೆಯಲ್ಲಿ ಸತತ ಮಳೆಗೆ ಕುಸಿದು ಬಿದ್ದಿರುವ ರತ್ನಮ್ಮ ಅವರ ಮನೆ ಗೋಡೆ.
Published on

ಹುಣಸೂರು: ಬುಧವಾರ ರಾತ್ರಿಯಿಡೀ ಸುರಿದ ಮಳೆಗೆ ಬಿಳಿಕೆರೆ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದೆ.

ಗ್ರಾಮದ ದಾಸ್ತಿಕೊಳ ಬಡಾವಣೆಯ ರತ್ನಮ್ಮ ಅವರ ಮನೆಯ ಹಿಂಭಾಗದ ಕೊಠಡಿಗಳು ನೆಲಕ್ಕುರುಳಿವೆ. ತಡರಾತ್ರಿ ಗೋಡೆ ಕುಸಿಯುವ ವೇಳೆ ಮನೆಯಲ್ಲಿ ಇಬ್ಬರು ಮಕ್ಕಳು, ಮೊಮ್ಮಕ್ಕಳು ಇದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಮನೆಯಲ್ಲಿದ್ದ ಪಾತ್ರೆ ಸಲಕರಣೆಗಳು ನುಜ್ಜುಗುಜ್ಜಾಗಿವೆ. ಮಳೆ ನೀರಿನಲ್ಲಿ ನೆನೆದು ದಿನಸಿ ನಾಶವಾಗಿದೆ. ಸ್ಥಳಕ್ಕೆ ಗ್ರಾ.ಪಂ. ಅಧಿಕಾರಿಗಳು ಅಥವಾ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರವಿಡೀ ಭೇಟಿ ನೀಡಿಲ್ಲವೆಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿದ್ದು, ಸರ್ಕಾರದಿಂದ ಪರಿಹಾರಧನ ಒದಗಿಸಿಕೊಡಲು ರತ್ನಮ್ಮ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net