ರಾಜಕಾಲುವೆ ತಡೆಗೋಡೆ ಕುಸಿತ

BIRUR RAJAKALUVE
ಬೀರೂರಿನ ಹಾಲಪ್ಪ ಬಡಾವಣೆಯ ಕೊನೆಯಲ್ಲಿ ರಾಜ ಕಾಲುವೆಯ ತಡೆಗೋಡೆ ಕುಸಿದಿರುವುದು.
Published on

ಬೀರೂರು: ಹೋಬಳಿಯಾದ್ಯಂತ ಶನಿವಾರ ರಾತ್ರಿ ಉತ್ತಮ ಮಳೆ ಸುರಿದಿದ್ದು, ಕೃಷಿಕರಲ್ಲಿ ಉತ್ಸಾಹ ಮೂಡಿಸಿದೆ. ಮಳೆಯ ರಭಸಕ್ಕೆ ಹಾಲಪ್ಪ ಬಡಾವಣೆಯ ಕೊನೆಯಲ್ಲಿರುವ ರಾಜಕಾಲುವೆಯ ತಡೆಗೋಡೆ ಕುಸಿದಿದೆ. ಅಲ್ಲದೆ ಲಿಂಗದಹಳ್ಳಿ ರಸ್ತೆಯಲ್ಲಿ ವಿದ್ಯುತ್ ತಂತಿ ತುಂಡಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಈಗಾಗಲೇ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಬಿತ್ತನೆ ಕಾರ್ಯಕ್ಕೆ ವೇಗ ಸಿಕ್ಕಿದಂತಾಗಿದೆ. ಇನ್ನು ಅಡಕೆ ಮತ್ತು ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿದ್ದು ಬೇಸಿಗೆಯಲ್ಲಿ ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ನಲ್ಲಿ ನೀರುಣಿಸುವುದು ತಪ್ಪಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net