

ಅಷ್ಟಕ್ಕೇ ನಿಲ್ಲದೆ ಪ್ರತಿಯೊಬ್ಬ ರೋಗಿಯ ಕರ್ತವ್ಯ, ಚಿಕಿತ್ಸಕರ ಆಚಾರ ಸಂಹಿತೆಯನ್ನೂ ವಿವರಿಸಿದ ಕೀರ್ತಿ ಚರಕಸಂಹಿತೆಗೆ ಸಲ್ಲುತ್ತದೆ. ಇಂದು ದಿನಬೆಳಗಾದರೆ ವೈದ್ಯ&ರೋಗಿಯ ಪವಿತ್ರವಾದ ಸಂಬಂಧ ಕೆಳಮಟ್ಟಕ್ಕೆ ಇಳಿಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಚಿಕಿತ್ಸಾ ಪ್ರಕ್ರಿಯೆಯಲ್ಲಿ ಏರುಪೇರಾದಾಗ ವೈದ್ಯರನ್ನು ದೂಷಿಸುವುದು, ಹಲ್ಲೆ ನಡೆಸುವುದು ಹಾಗೂ ಪ್ರಾಣಾಪಾಯ ತಂದೊಡ್ಡುವುದನ್ನು ಕಾಣುತ್ತಿದ್ದೇವೆ. ವೈದ್ಯರ ಬಗೆಗಿನ ಗೌರವ, ಆದರ, ಅಭಿಮಾನ, ಶ್ರದ್ಧೆಗಳೆಲ್ಲವೂ ಕಡಿಮೆಯಾಗಬಾರದಿತ್ತು, ಆದರೆ ಹಾಗಾಗುತ್ತಿರುವುದು ದುರಂತ. ಸಾವಿರಾರು ವರ್ಷಗಳ ಹಿಂದೆಯೇ ಇದನ್ನರಿತಿದ್ದ ಆಯುರ್ವೇದದ ಆದಿಗ್ರಂಥಗಳು ರೋಗಿಯಾದವನ ಕರ್ತವ್ಯವನ್ನು ಬಿಡಿಸಿ ಹೇಳಿದ್ದು ಅಚ್ಚರಿ ತರುತ್ತದೆ. ಬುದ್ಧಿವಂತನಾದ, ಆಯುಷ್ಯವನ್ನು ಅಪೇಸುವ ವ್ಯಕ್ತಿಯು ಪ್ರಾಣಾಚಾರ್ಯರಾದ ಚಿಕಿತ್ಸಕರಿಗೆ ಯಾವುದೇ ಪ್ರಕಾರದಲ್ಲಿ
ಅಹಿತ ಉಂಟುಮಾಡುವ ಮಾತನ್ನಾಗಲೀ, ಆಲೋಚನೆಯನ್ನಾಗಲೀ ಮಾಡ ಕೂಡದು. ಅನಾದರ, ಆಕ್ರೋಶ, ನಿಂದೆಯ ಮಾತುಗಳನ್ನು ಆಡಬಾರದು. ಚಿಕಿತ್ಸೆಯ ಬಳಿಕ ಕೃತತಾ ಪೂರ್ವಕವಾಗಿ ಏನನ್ನು ಕೊಡಬೇಕೆಂದು ಮೊದಲೇ ಹೇಳಿರಲಿ, ಹೇಳಿಲ್ಲದಿರಲಿ ನೀಡಬೇಕಾದುದನ್ನು ಗೌರವದಿಂದ ನೀಡುವುದು ಕರ್ತವ್ಯವಾಗಿದೆ. ಏಕೆಂದರೆ ವೈದ್ಯನು ಪ್ರಾಣಾಚಾರ್ಯ.
ಹಿಂದೆಲ್ಲಾ ವೈದ್ಯರಿಗೆ ಆರ್ಥಿಕವಾಗಿ ಸ್ವಸಾಮರ್ಥ್ಯವಿದ್ದರೆ ಅಂತಹ ವೈದ್ಯರು ಶುಶ್ರೂಷಾ ಕೇಂದ್ರ, ಇನ್ನೂ ಹೆಚ್ಚು ಬಲಾಢ್ಯರಾಗಿದ್ದರೆ ಆಸ್ಪತ್ರೆಗಳನ್ನು ಪ್ರಾರಂಭಿಸುತ್ತಿದ್ದರು. ಅದಿಲ್ಲವಾದರೆ ಪುಟ್ಟದಾದ ಸ್ವಂತ
ಚಿಕಿತ್ಸಾಲಯ ಮಾಡಿಕೊಳ್ಳುತ್ತಿದ್ದರು. ಇದ್ಯಾವುದೂ ಸಾಧ್ಯವಿಲ್ಲದಾಗ ವೈದ್ಯಕಿಯ ವ್ಯವಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರಿ ಕೊಳ್ಳುತ್ತಿದ್ದರು. ಇಂದು ಕಾಲ ಬದಲಾಗಿದೆ. ವೈದ್ಯರ ಬದಲು ಬಹುತೇಕ ಉದ್ಯಮಿಗಳೇ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಸೇವೆ ಹೋಗಿ ವ್ಯಾಪಾರಕ್ಕೇ ಪ್ರಾಶಸ್ತ್ಯ ಬಂದಿದೆ. ಅಲ್ಲಿ ವೃತ್ತಿನಿರತರಾಗಿರುವ ವೈದ್ಯರಿಗೆ ವ್ಯಾಪಾರ, ವ್ಯವಹಾರ ಕುದುರಿಸುವ ಗುರಿ ನೀಡುವಷ್ಟು ಹೀನ ಮನಸ್ಥಿತಿಗೆ ತಲುಪಿರುವುದೂ ವೈದ್ಯಕಿಯ ೇತ್ರದ ಅಭಿವೃದ್ಧಿಯ ಸಂಕೇತವಲ್ಲ, ಅದು ದುರಂತ. ಇದಕ್ಕಾಗಿಯೇ ಪ್ರಾಚಿನರು ಚಿಕಿತ್ಸಕರ ಆಚಾರ ಸಂಹಿತೆಯನ್ನೂ ಹೇಳಿದರು. ಚರಕ ಸಂಹಿತೆಯ ಮಾತುಗಳನ್ನು ಕೇಳಿ. ಯಾವ ವೈದ್ಯನು ಸವೋರ್ತಷ್ಟ ಧರ್ಮಪಾಲನೆ ಮಾಡಲು ಬಯಸುತ್ತಾನೋ, ಆ ವೈದ್ಯನು ಎಲ್ಲಾ ರೋಗಿಗಳನ್ನೂ ತನ್ನ ಮಗನ ಸಮಾನ ಎಂಬುದಾಗಿ ಪರಿಗಣಿಸಿ ಪ್ರಯತ್ನಶಿಲನಾಗಬೇಕು. ಎಲ್ಲಾ ತರಹದ ರೋಗ ಬಾಧೆಗಳಿಂದ ಸಂರಸಬೇಕು. ಪರಮಪದ ವಾದ ಮೋಕ್ಷಪ್ರಾಪ್ತಿ ಬಯಸುವ ಧರ್ಮಾತ್ಮ ಮಹರ್ಷಿಗಳು ಮನುಜರ ಧರ್ಮ, ಅರ್ಥ, ಕಾಮಗಳ ಸಾಧನೆಯ ಉದ್ದೇಶದೊಂದಿಗೆ ಆಯುರ್ವೇದ ಶಾಸ ಬೋಧಿಸಿದರು. ಇದನ್ನು ವೈದ್ಯರಾದವರು ಅರ್ಥೈಸಿಕೊಂಡು ಧನ ಸಂಗ್ರಹ ಅಥವಾ ಕಾಮನೆಗಳ ತೃಪ್ತಿಗಾಗಿ ಮಾತ್ರವೇ ಉದ್ಯುಕ್ತರಾಗದೆ ಪ್ರಾಣಿಗಳ ಮೇಲಿನ ದಯೆಯೇ ಪ್ರಧಾನ ಆಶಯವಾಗಿ ಇದ್ದುಕೊಂಡು ವೃತ್ತಿನಿರತರಾದರೆ ಅವರು ಮೋಕ್ಷ ಪ್ರಾಪ್ತಿಗೆ ಅಧಿಕಾರಿಗಳಾಗಿದ್ದು ಸರ್ವಶ್ರೇಷ್ಟ ಚಿಕಿತ್ಸಕರಾಗುತ್ತಾರೆ. ಅದು ಬಿಟ್ಟು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಮಾರುವಂತೆ ವ್ಯಾಪಾರೀ ಮನೋಭಾವ ಹೊಂದಿ ವಿಕ್ರಯದಲ್ಲಿ ನಿರತರಾದರೆ ಅವರಿಗೆ ಜೀವನದಲ್ಲಿ ಚಿನ್ನದ ರಾಶಿಯ ಬದಲು ಧೂಳಿನ ರಾಶಿಯಷ್ಟೇ ಪ್ರಾಪ್ತವಾಗುತ್ತದೆ, ಅದನ್ನೇ ಆರಾಧಿಸಬೇಕಾಗುತ್ತದೆ!
ದಾರುಣವಾದ ಕಾಯಿಲೆಯಿಂದ ಬಳಲಿ ಬಡಕಲಾದ ರೋಗಿಯು ಯಾತನಾಮಯ ರೋಗದಿಂದಾಗಿ ಇಹಲೋಕ ತ್ಯಜಿಸಿ ಯಮಲೋಕಕ್ಕೆ ತೆರಳಲು ಸಿದ್ಧನಾಗಿರುವಾಗ ಆತನ ಯಮಪಾಶ ವನ್ನು ತುಂಡರಿಸಿ ವೈದ್ಯನು ಮಾಡುವ ಜೀವಿತದಾನಕ್ಕಿಂತ ಮಿಗಿಲದ ದಾನವಿಲ್ಲ. ಹಾಗಾಗಿ ಚಿಕಿತ್ಸಕನೇ ವಿಶ್ವದ ಸವೋರ್ಚ್ಛ ದಾನಿ. ಪ್ರಾಣಿ ದಯೆಯೇ ಧರ್ಮವೆಂದು ತಿಳಿದುಕೊಂಡು ಚಿಕಿತ್ಸೆಯಲ್ಲಿ ತೊಡಗುವ ವೈದ್ಯನ ಸಕಲ ಮನೋ ಅಭೀಷ್ಟೆಗಳೆಲ್ಲಾ ನೆರವೇರಿ ಅತ್ಯಂತ ಸುಖವನ್ನು ಹೊಂದುತ್ತಾನೆ. ಇವನೇ ನಿಜಾರ್ಥದಲ್ಲಿ ಸಿದ್ಧಾರ್ಥ ವೈದ್ಯ ಎನಿಸಿಕೊಳ್ಳುತ್ತಾನೆ. ಪ್ರಾಣಾಚಾರ್ಯ, ಜೀವಿತದಾನಿ, ಸಿದ್ಧಾರ್ಥ ವೈದ್ಯ& ಇವರೇ ಜಗದ ಇಂದಿನ ಅವಶ್ಯಕತೆ ಹಾಗೂ ಅನಿವಾರ್ಯತೆ.
(ಪ್ರತಿಕ್ರಿಯಿಸಿ: vvsudina@gmail.com)