ಏರಿಕೆ ಕಂಡ ಕೊಬ್ಬರಿ; ಬೆಲೆತೆಂಗು ಬೆಳೆಗಾರರ ಸಂತಸ

dry-coconut-500x500
Published on

ಬೆಂಗಳೂರು:
ಬೆಲೆ ಕುಸಿತದಿಂದ ತತ್ತರಿಸಿದ್ದ ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭ್ಯವಾಗಿದ್ದು, ತೆಂಗುಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ.
ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ರೂ 14,202ಕ್ಕೆ ಹರಾಜಾಗಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ 13,500ರೂಗೆ ಮಾರಾಟವಾಗಿದೆ. ನಾಗಮಂಗಲ, ಕೆ.ಆರ್.ಪೇಟೆ, ದಾವಣಗೆರೆ, ಹುಳಿಯಾರು, ಶಿರಾ, ತುರುವೇಕೆರೆ ಮತ್ತು ಚನ್ನರಾಯಪಟ್ಟಣ ಮಾರುಕಟ್ಟೆಯಲ್ಲಿ 12 ಸಾವಿರ ಆಜು ಬಾಜಿನಲ್ಲಿ ಮಾರಾಟವಾಗಿರುವುದು ವಿಶೇಷ.
ಕ್ವಿಂಟಾಲ್ ಕೊಬ್ಬರಿ 8 ಸಾವಿರಕ್ಕೆ ಕುಸಿದಿದ್ದ ಕಾರಣ ಬೆಳೆಗಾರರು ಕಂಗಾಲಾಗಿದ್ದರು. ಕೇಂದ್ರ ಸರ್ಕಾರ ಬೆಂಬಲ ಬೆಲೆ ೋಷಿಸಿದ್ದಕ್ಕೆ ರಾಜ್ಯ ಸರ್ಕಾರ ಇನ್ನಷ್ಟು ಬೆಲೆ ಸೇರಿಸಿ ಕೊಡುತ್ತಿದ್ದರೂ ರೈತರಿಗೆ ಸಮಾಧಾನವಾಗಿರಲಿಲ್ಲ. ವಿಧಿಯಿಲ್ಲದೆ ಬೆಂಬಲ ಬೆಲೆಯಲ್ಲಿ ತಮ್ಮ ಕೊಬ್ಬರಿ ಖರೀದಿ ಮಾಡಬೇಕು ಎಂದು ಕೊಬ್ಬರಿ ಖರೀದಿ ಕೇಂದ್ರಗಳ ಮುಂದೆ ಸಾಲುಗಟ್ಟಿದ್ದರು.
ಕೊಬ್ಬರಿಯ ಬೆಲೆ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಬೆಳೆಗಾರರ ಮೊಗದಲ್ಲಿ ಸ್ವಲ್ಪ ನೆಮ್ಮದಿಯ ಸೆಲೆ ಚಿಗುರೊಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net