

ಜಬಲ್‌ಪುರ: ಸ್ವಿಮ್ಮಿಂಗ್ ಕೋಚ್ ಹಾಗೂ ತರಬೇತಿ ನಿರತ ಈಜುಪಟುಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಮಧ್ಯಪ್ರದೇಶ ಜಬಲ್‌ಪುರದಲ್ಲಿ ನಡೆದಿದೆ.
ಘಟನೆಯಲ್ಲಿ ಮಧ್ಯಪ್ರದೇಶ ಈಜು ಸಂಸ್ಥೆಯ ಕೋಚ್ ಸೇರಿದಂತೆ ಮೂವರು ಗಾಯಗೊಂಡಿದ್ದು, ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುನಿಲ್ ಪಟೇಲ್ ಮೇಲೆಯೂ ಹಲ್ಲೆ ನಡೆದಿದೆ. ನೀರಿಗಿಳಿಯುವ ಕಾರಣಕ್ಕೆ ಈಜುಪಟುಗಳು ಹಾಗೂ ಕೋಚ್ ನಡುವೆ ಪರಸ್ಪರ ವಾಗ್ವಾದ ನಡೆದು ನಂತರ ಹೊಡೆದಾಡಿಕೊಂಡಿದ್ದಾರೆ.
ಇನ್ನು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಘಟನೆಯಲ್ಲಿ ಭಾಗಿಯಾಗಿದ್ದವರನ್ನು ವಶಕ್ಕೆ ಪಡೆದಿದ್ದಾರೆ.(ಏಜೆನ್ಸೀಸ್)