

ವಿಜಯವಾಣಿ ಸುದ್ದಿಜಾಲ ಗದಗ
ಉತ್ತಮ ಆಥಿರ್ಕ ವಹಿವಾಟಿನ ಮೂಲಕ ಸಹಕಾರ ರಂಗದಲ್ಲಿ ಉತ್ತಮ ಸಾಧನೆ ಮೆರೆದು ಕರ್ನಾಟಕ ಮತ್ತು ಮಹಾರಾಷ್ಷ್ರ ರಾಜ್ಯಗಳ ಜನರ ಪ್ರೀತಿಗೆ ಪಾತ್ರವಾಗಿ ಜನಮನ್ನಣೆ ಪಡೆದಿರುವ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೋಸೈಟಿಯ ಸೇವೆ ಶ್ಲಾನೀಯ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅತ್ಯುತ್ತಮ ಉದ್ಯಮದಾರ ಪ್ರಶಸ್ತಿ ಪುರಸತ ಶಿವಪ್ಪ ಮುಳಗುಂದ ಹೇಳಿದರು.
ಬೆಟಗೇರಿ ಭಾಗದ ಶರಣಬಸವೇಶ್ವರ ದೇವಸ್ಥಾನದ ಹತ್ತಿರದಲ್ಲಿ ರವಿವಾರ ಬೀರೇಶ್ವರ ಕೋ ಆಪ ಕ್ರೆಡಿಟ್ ಸೊಸೈಟಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೀರೇಶ್ವರ ಕೋ ಆಪ ಕ್ರೆಡಿಟ್ ಸೋಸೈಟಿಯ 154 ಶಾಖೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಜನಸೇವೆಯಲ್ಲಿ ತೊಡಗಿವೆ. ಈ ಸೋಸೈಯಟಿಯಲ್ಲಿ ಈಗಾಗಲೇ 3.53 ಲ ಸದಸ್ಯರಿದ್ದಾರೆ. 3373 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹವಾಗಿದೆ. 2606 ಕೋಟಿ ರೂ ಸಾಲವನ್ನು ನೀಡಿದೆ. ಈ ಸೋಸಾಯೈಟಿ ಜನಸ್ನೇಹಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ ಎಂದರು.
ವಿಜಯಲಕ್ಷಿ$್ಮ ಅಂಗಡಿ, ಎಸ್. ಎಸ್. ಪಟ್ಟಣಶೆಟ್ಟಿ, ಎಂ. ಎಸ್. ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಕಿರಣ ಚೌಗಲೆ, ಹುಚ್ಚಪ್ಪ ಶಹಪೂರ, ರಾಹುಲ್ ಹಲಕಾಟೆ, ವೀರನಗೌಡ ಮರಿಗೌಡ ಇತರರು ಇದ್ದರು.