ಸಹಕಾರ ಸಂಘಗಳು ಬಡ, ಮಧ್ಯಮ ವರ್ಗದ ರೈತರ ಜೀವನಾಡಿ

26blrp2.
Published on

ಬೇಲೂರು: ಸಹಕಾರ ಸಂಘಗಳು ಬಡ, ಮಧ್ಯಮ ವರ್ಗದ ರೈತರ ಹಾಗೂ ಸಾರ್ವಜನಿಕರ ಜೀವನಾಡಿಯಾಗಿದ್ದು, ಸಹಕಾರ ಸಂಘಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಂಡು ಉತ್ತಮ ಬದುಕು ಸಾಗಿಸಲು ಮುಂದಾಗಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.


ಪಟ್ಟಣದ ಸೌಮ್ಯಕೇಶವ ಮಹಿಳಾ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ಉದಯವಾದ ಮೇಲೆ ರೈತರಿಗೆ, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲವಾಗಿದೆ, ಮಹಿಳೆಯರು ಸಹಕಾರ ಸಂಘಗಳನ್ನು ಸ್ಥಾಪಿಸಿ ಸ್ವಾವಲಂಬಿಗಳಾಗಿ ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ ಮಹಿಳೆಯರು ಇಂತಹ ಸಹಕಾರ ಸಂಘಗಳ ಮೂಲಕ ಸ್ವಉದ್ಯೋಗದೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಹೆಚ್ಚಿನ ಗಮನಹರಿಸಬೇಕು ಎಂದರು.


ಸಂಘದ ಅಧ್ಯಕ್ಷೆ ಎಚ್.ಪಿ.ರತಿದೇವಿ ಮಾತನಾಡಿ, ಷೇರುದಾರರ ಸಹಕಾರದಿಂದ ಸಂಘ ಉತ್ತಮವಾಗಿ ನಡೆಯುತ್ತಿದ್ದು, ಷೇರುದಾರರು ಹೆಚ್ಚಿನ ವ್ಯವಹಾರ ನಡೆಸಲು ಮುಂದಾಗಬೇಕು ಎಂದು ಮನವಿ ಮಾಡಿದರು.


ನಿರ್ದೇಶಕಿ ಭಾರತೀಗೌಡ ಮಾತನಾಡಿದರು. ನಿರ್ದೇಶಕರಾದ ಉಮಾ, ಸುಧಾ, ರೇಖಾ, ಕಮಲಾಕ್ಷಿ, ರಾಜಮ್ಮ, ನಾಗರತ್ನ, ಕಾರ್ಯದರ್ಶಿ ಯಶೋದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net