ಆರ್ಥಿಕ ಪ್ರಗತಿಗೆ ಸಹಕಾರ ಕ್ಷೇತ್ರ ವರದಾನ

sahakara sangha photo
ಕಡೂರಿನ ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರಿ ನಿಯಮಿತ ಸಂಘದ ವಾರ್ಷಿಕ ಮಹಾಸಭೆಯನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭಂಡಾರಿ ಶ್ರೀನಿವಾಸ್, ತೋಟದಮನೆ ಮೋಹನ್‌ಕುಮಾರ್, ಜಯಪ್ಪ, ಪರಮೇಶ್ವರಪ್ಪ, ಹುಚ್ಚಪ್ಪ, ಕುಮಾರ್ ಮತ್ತಿತರಿದ್ದರು.
Published on

ಕಡೂರು: ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಘಗಳ ಪಾತ್ರ ಅಮೂಲ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರಿ ನಿಯಮಿತ ಸಂಘದ ಕಚೇರಿ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ 2022-23ನೇ ಸಾಲಿನ 2ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಆರ್ಥಿಕ ಪ್ರಗತಿ ಕಾಣಲು ಸಹಕಾರಿ ಕ್ಷೇತ್ರಗಳು ಹೆಚ್ಚು ಉಪಯುಕ್ತ. ಸಂಘಗಳಿಂದ ದೊರಕುವ ಸಾಲಸೌಲಭ್ಯಗಳು ಶ್ರಮಿಕ ಜೀವಿಗಳಿಗೆ ವರದಾನ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸಹಕಾರ ಸಂಘವು ಪರಸ್ಪರ ಸಹಾಯ ಮತ್ತು ಸ್ವಸಹಾಯದ ಕಲ್ಪನೆ ಅನುಸರಿಸುತ್ತದೆ. ಪ್ರತಿಯೊಬ್ಬ ಸದಸ್ಯರು ಸಂಘದ ಬೆಳವಣಿಗೆಗೆ ಹೆಚ್ಚು ಶ್ರಮಿಸಿದಾಗ ಮತ್ತಷ್ಟು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಹೇಳಿದರು.
ಸಂಘದ ಅಧ್ಯಕ್ಷ ಜಿ.ಜಯಪ್ಪ ಮಾತನಾಡಿ, ಕಳೆದ 2 ವರ್ಷದ ಅವಧಿಯಲ್ಲಿ ಸಂಘ 980 ಸದಸ್ಯರನ್ನು ಹೊಂದಿದ್ದು ಇದುವರೆಗೂ 59 ಲಕ್ಷ ರೂ. ಸಾಲ ನೀಡಲಾಗಿದೆ. ಸಾಲ ಮರುಪಾವತಿಯಿಂದಾಗಿ ಶೇ. 100ರಷ್ಟು ಸಾಧನೆ ಸಾಧ್ಯವಾಗಿದೆ.
ಷೇರುದಾರರ ಸಹಕಾರದಿಂದ ಸಂಘ ಎ ಗ್ರೇಡ್ ಪಡೆದಿದ್ದು 52 ಲಕ್ಷ ರೂ.ಗಳ ಠೇವಣಿ ಸಂಗ್ರಹವಾಗಿದೆ. ಷೇರುದಾರರಿಂದ 28 ಲಕ್ಷ ರೂ. ಹೊಂದಲಾಗಿದೆ. ಈಗಾಗಲೇ ಅಭರಣ, ಮನೆ ದಾಖಲೆಗಳ ಮತ್ತು ವಾಹನಗಳ ಮೇಲೆ ಸಾಲವನ್ನು ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ 92 ಸಾವಿರ ರೂ. ಲಾಭಾಂಶದಿಂದ ಪ್ರಗತಿ ಕಾಣಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಲವು ಹೊಸ ಯೋಜನೆ ರೂಪಿಸಲಾಗುವುದು ಎಂದರು.
ಪುರಸಭಾ ಸದಸ್ಯ ತೋಟದ ಮನೆ ಮೋಹನ್‌ಕುಮಾರ್, ಸಂಘದ ಉಪಾಧ್ಯಕ್ಷ ಟಿ. ಪರಮೇಶ್ವರಪ್ಪ ,ನಿರ್ದೇಶಕರಾದ ನಲ್ಲೂರಿ ಮಂಜುನಾಥ್, ಕೆ.ಎಚ್.ಲಿಂಗರಾಜು, ಕೆ.ಎಲ್.ಹುಚ್ಚಪ್ಪ, ಬಿ. ಮಹೇಶ್ವರಪ್ಪ, ಟಿ.ಆರ್.ಈಶ್ವರ್, ಕೆ.ಎಸ್. ಕುಮಾರ್, ಎಂ. ಹಾಲಪ್ಪ, ಎಚ್.ಬಿ.ಯೋಗೀಶ್, ವೇದಾ ಅಜ್ಜಯ್ಯ, ಮಾನಸ ಹರೀಶ್ ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಸುಪ್ರಿಯಾ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net