

ಕೋಲಾರ: ರಾಜ್ಯದಲ್ಲಿ ಶಾಂತಿಯುತ ವಾತಾವರಣ ಹದಗೆಟ್ಟಿದೆ, ಸಿಎಂ ಸಿದ್ದರಾಮಯ್ಯ ಅವರ ಮೇಲೆ ಜನಕ್ಕೆ ನಂಬಿಕೆಯಿಲ್ಲದಂತಾಗಿದ್ದು, ಅಧಿಕಾರದಿಂದ ಕೆಳಗಿಳಿಯುವ ದಿನಗಳು ಸಮೀಪಿಸುತ್ತಿವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು.
ನಗರದಲ್ಲಿ ಪ್ರತಿಭಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಕರುನಾಡನ್ನು ಸ್ಲೀಪಿಂಗ್ ಸೆಲ್ ಮಾಡಿದ್ದಾರೆ. ಆದ್ದರಿಂದ ಅವರನ್ನು ಜನ ನಂಬುವುದಿಲ್ಲ ಎಂದರು.
ಸಮಾಜದಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಮೂಲಕ ದಾರಿ ತಪ್ಪಿಸಿದ್ದಾರೆ. ಈಗ ಸಿದ್ದರಾಮಯ್ಯ ಮತ್ತು ತಂಡವರು ಲ್ಯಾಂಡ್ ಜಿಹಾದ್ ಮಾಡುತ್ತಿದ್ದಾರೆ. ಇದು ಮತಾಂಧರನ್ನು ಓಲೈಕೆ ಮಾಡುವ ಹುನ್ನಾರವಾಗಿದೆ. ಇದಕ್ಕೆಲ್ಲ ಸಿದ್ದರಾಮಯ್ಯ ಪ್ರಯೋಜಕರಾಗಿದ್ದಾರೆ ಎಂದು ಛೇಡಿಸಿದರು.
ಬಾಬರ್ ದಾಳಿ ಮಾಡಿ ರಾಮ ಮಂದಿರ ನಾಶ ಮಾಡಿದರು, ಈಗ ಸಿದ್ದರಾಮಯ್ಯ ಎಸ್ಸಿ-ಎಸ್ಟಿ ರೈತರ ಜಮೀನು ಲೂಟಿ ಮಾಡಲು ಮುಸ್ಲಿಮರಿಗೆ ಪರ್ಮಿಟ್ ನೀಡಿದ್ದಾರೆ. ಕರ್ನಾಟಕದ ಎಲ್ಲ ರೈತರು ಕೂಡಲೇ ತಾಲೂಕು ಕಚೇರಿಗೆ ಹೋಗಿ ಪಹಣಿ ಪರಿಶೀಲಿಸಿಕೊಳ್ಳಬೇಕು, ಇಲ್ಲದಿದ್ದರೆ ರಾತ್ರೋರಾತ್ರಿ ಪರಭಾರೆ ಆಗುತ್ತದೆ ಎಂದು ಎಚ್ಚರಿಸಿದರು.
ನಮ್ಮ ಕಾಲದಲ್ಲಿ ವಕ್ ಬೋರ್ಡ್ಗೆ ಜಮೀನು ಮಾಡಿಕೊಟ್ಟಿದ್ದರೆ ಅಽಕಾರಿಯನ್ನು ಒಳಗೆ ಹಾಕಿ ಎಂದು ಹೇಳಿದ್ದೆವು. ಈಗ ಸಿದ್ದರಾಮಯ್ಯ ಅವರು ತಪ್ಪಿತಸ್ಥರನ್ನು ಒಳಗೆ ಹಾಕಿ ಅಂತ ಹೇಳಲಿ ಎಂದು ಸವಾಲು ಹಾಕಿದರು.
ವಕ್ ಬೋರ್ಡನ್ನು ನಾವು ರಚನೆ ಮಾಡಿದ್ದಲ್ಲ, ೨೦೧೩ರಲ್ಲಿ ಮನಮೋಹನ್ ಸಿಂಗ್ ಅಽಕಾರದಿಂದ ಇಳಿಯುವಾಗ ರಚನೆ ಮಾಡಿರೊದು. ಆದೇ ಆದೇಶವನ್ನು ಮುಂದಿಟ್ಟುಕೊAಡು ಈ ರೀತಿ ಮಾಡುತ್ತಿದ್ದಾರೆ, ನೋಟಿಸ್ ವಾಪಸ್ ಪಡೆದರೆ ಉಪಯೋಗ ಇಲ್ಲ, ಪಹಣಿಯಲ್ಲೂ ಬದಲಾವಣೆಯಾಗಬೇಕು ಎಂದರು.