ತಪ್ಪೊಪ್ಪಿಕೊಳ್ಳದ ಸಿಎಂ: ಆರ್.ಅಶೋಕ್ ಟೀಕೆ | Stampede incident

R Ashok
Published on

ಬೆಂಗಳೂರು: ತಪ್ಪೊಪ್ಪಿಕೊಂಡವರು ದೊಡ್ಡ ವ್ಯಕ್ತಿಗಳಾಗುವರು. ಇದು, ಗಾಂಧೀಜಿಯವರು ಹೇಳಿದ ಮಾತು. ಹಾಗೆಯೇ ಕಾಲ್ತುಳಿತ ದುರಂತದ ತಪ್ಪು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡು, ರಾಜ್ಯದ ಜನರ ಕ್ಷಮೆ ಕೇಳಿದ್ದರೆ ದೊಡ್ಡ ವ್ಯಕ್ತಿಗಳಾಗುತ್ತಿದ್ದರು’ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಶುಕ್ರವಾರ ಹೇಳಿದರು.

ಕಾಲ್ತುಳಿತ ದುರ್ಘಟನೆ ಮೇಲೆ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರಕ್ಕೆ ಆಕ್ಷೇಪಿಸಿ, ತಪ್ಪೊಪ್ಪಿಕೊಂಡು ಕ್ಷಮಾಪಣೆಗೆ ಪಟ್ಟು ಹಿಡಿದು ಸಭಾತ್ಯಾಗ ಮಾಡುವ ಮುನ್ನ ಅವರು ಮಾತನಾಡಿದರು.

‘ಪರೀಕ್ಷೆ ರಿಸಲ್ಟ್ ನೋಡಿ ಬಂದ ಮಗನನ್ನು ಅಪ್ಪ ಕರೆದು ರಿಸಲ್ಟ್ ಏನಾಯಿತು ಎಂದು ಕೇಳಿದ. ಆತ ೇಲಾಗಿದ್ದಾನೆ, ಈತ ೇಲಾದ ಎಂದು ಹೇಳಿದ ಮಗ ಕೊನೆಗೂ ತಾನು ೇಲ್ ಆಗಿದ್ದನ್ನು ಹೇಳಲೇ ಇಲ್ಲ. ದುರ್ಘಟನೆಯ ಚರ್ಚೆಗೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರವೂ ಹಾಗೆಯೇ ಇದೆ’ ಎಂದು ತಿವಿದರು.

ದುರಂತಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ, ಸಿಎಂ, ಡಿಸಿಎಂ, ಗೃಹ ಸಚಿವರೇ ನೇರ ಹೊಣೆಗಾರರು. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಿಎಂ ಪ್ರಯತ್ನಿಸಿದ್ದಾರೆ ಎಂದು ಟೀಕಿಸಿದರು.

ಕ್ರಮಕೈಗೊಳ್ಳಲೇ ಇಲ್ಲ

ಸಿಎಂ ಅಧೀನದಲ್ಲಿ ಬರುವ ಡಿಪಿಎಆರ್ ಕಾರ್ಯದರ್ಶಿ ಕ್ರೀಡಾಂಗಣದ ಕಾರ್ಯಕ್ರಮಕ್ಕೆ ಪರವಾನಗಿ ಕೊಟ್ಟಿದ್ದಾರೆ. ಡಿಸಿಪಿ ಸಾಧ್ಯವಾಗದು ಎಂದು ಪತ್ರ ಬರೆದು ತಿಳಿಸಿದ್ದರೂ ಒಪ್ಪಿಗೆ ನೀಡಿದ್ದು, ಅವರ ವಿರುದ್ಧ ಕ್ರಮವಾಗಲಿಲ್ಲ.

ಕಾರ್ಯಕ್ರಮಕ್ಕೆ ಜನರು ಸೇರುವ ಅಂದಾಜು, ದುರ್ಘಟನೆ ಸಂಭವಿಸಿ ಒಂದೂವರೆ ತಾಸಿನ ನಂತರ ಸಿಎಂಗೆ ಮಾಹಿತಿ ತಲುಪುತ್ತದೆ ಎಂದರೆ ಗುಪ್ತಚರ ವೈಲ್ಯ ಎದ್ದು ಕಾಣುತ್ತದೆ. ಅವರ ವಿರುದ್ಧವೂ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಬೆಂಗಳೂರಿನಲ್ಲಿ 15 ಸಾವಿರ ಪೊಲೀಸ್ ಸಿಬ್ಬಂದಿ ಬಲವಿದೆ. ಆದರೆ ನ್ಯಾ.ಕುನ್ಹಾ ವರದಿ ಪ್ರಕಾರ 194 ಜನರಿದ್ದರು. ಲಭ್ಯ ಪೊಲೀಸ್ ಬಲವನ್ನು ನಿಯೋಜಿಸಲಿಲ್ಲ, ಸರ್ಕಾರದ ವೈಲ್ಯ ನಿಚ್ಚಳವೆಂದು ಆರ್.ಅಶೋಕ್ ಹೇಳಿದಾಗ ಆರಗ ಜ್ಞಾನೇಂದ್ರ ಧ್ವನಿಗೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net