ಸ್ವಾಧೀನವಾದ ಜಮೀನಿಗೆ ಪರ್ಯಾಯವಾಗಿ ಸೈಟು ಕೊಟ್ಟಿದ್ದಾರೆ: ಸಿಎಂ

CM Siddaramaiah
Published on

ಬೆಂಗಳೂರು:
ನನ್ನ ಪತ್ನಿಗೆ ಸೇರಿದ ಜಮೀನನ್ನು ಮೂಡಾ ಸ್ವಾಧೀನ ಮಾಡಿಕೊಂಡಿದ್ದು, ಅದಕ್ಕೆ ಪರ್ಯಾಯವಾಗಿ 50: 50 ಅನುಪಾತದಲ್ಲಿ ಬೇರೆಡೆ ನಿವೇಶನಗಳನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಿಂಗ್ ರೋಡ್ ಪಕ್ಕದ ಕೆಸರೆಯಲ್ಲಿ 3 ಎಕರೆ 16 ಗಂಟೆ ಜಮೀನುದ್ದು, ಅದನ್ನು ನನ್ನ ಭಾವಮೈದುನ ನನ್ನ ಪತ್ನಿಗೆ ಅರಿಶಿನ ಕುಂಕಮಕ್ಕಾಗಿ ದಾನವಾಗಿ ಕೊಟ್ಟಿದ್ದಾರೆ. ಆ ಜಮೀನು ಸ್ವಾಧೀನವಾದ ಮೇಲೆ ನಿವೇಶನ ನೀಡಿದ್ದಾರೆ ಎಂದರು.
ಜಮೀನು ಕಳೆದುಕೊಂಡವರಿಗೆ 50: 50 ಅನುಪಾತದಲ್ಲಿ ಸೈಟು ಕೊಡಬೇಕು ಎಂದು ಕಾನೂನು ಮಾಡಿದ್ದು ಬಿಜೆಪಿಯವರು. ನಮ್ಮ ಜಮೀನನ್ನು ಸ್ವಾಧೀನ ಮಾಡಿಕೊಳ್ಳದೇ ಮೂಡಾದವರು ನಿವೇಶನಗಳನ್ನು ಮಾಡಿ ಹಂಚಿದ್ದರು. ಹಂಚಿದ ಮೇಲೆ ನಮಗೆ ಕಾನೂನುಬದ್ಧವಾಗಿ ನಿವೇಶನ ಕೊಡಬೇಕು. ಅದರಂತೆ 50:50 ಕೊಡಲು ಒಪ್ಪಿದರು ಎಂದರು.
ನಾನು ಅಧಿಕಾರದಲ್ಲಿದ್ದಾಗ ನಿವೇಶನ ತೆಗೆದುಕೊಳ್ಳಲು ಹೋಗಿಲ್ಲ. ಸರ್ಕಾರದ ನಿಯಮಾವಳಿ, ಆದೇಶದ ಪ್ರಕಾರ ಕೊಡಿ ಎಂದು ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಳಿಕೊಂಡಿದ್ದೆವು. ಆಗ ಅವರು ಬೇರೆ ಬೇರೆ ಸ್ಥಳಗಳಲ್ಲಿ ಸಮಾನಾಂತರ ನಿವೇಶನಗಳನ್ನು ಕೊಟ್ಟಿದ್ದಾರೆ.ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net