ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕೈ ಬೆರಳಿಗೆ ಗಾಯ; ಸಭೆ ನಡುವೆಯೇ ವೈದ್ಯರಿಂದ ಚಿಕಿತ್ಸೆ

CM Siddaramaiah
Published on

ಬೆಂಗಳೂರು:  ಜನಸ್ಪಂದನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕೈಗೆ ಗುಂಡು ಸೂಜಿ ಚುಚ್ಚಿ ಗಾಯ ಆಗಿರೋ ಘಟನೆ ನಡೆದಿದೆ.  ವೈದ್ಯರು ದಿಢೀರ್ ದೌಡಾಯಿಸಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿ 313 ರಿಂದ ಜನಸ್ಪಂದನೆ ಕಾರ್ಯಕ್ರಮ ನಡೆಯುತ್ತಿತ್ತು. ಯಾರೋ ಒಬ್ಬ ವ್ಯಕ್ತಿ ಕೊಟ್ಟ ಮನವಿ ಪತ್ರ ಓದುತ್ತಿದ್ದಾಗ  ಸಿಎಂ ಎಡಗೈ ಬೆರಳಿಗೆ ಗುಂಡು ಸೂಚಿ ಚುಚ್ಚಿಬಿಟ್ಟಿದೆ.

ಈ ವೇಳೆ ಮುಖ್ಯಮಂತ್ರಿಗಳು ಬೆರಳಿಗೆ ಕರ್ಚೀಫ್ ಸುತ್ತಿಕೊಂಡು ಸಭೆಗೆ ತೆರಳಿದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ವೈದ್ಯರು ಬೆರಳಿಗೆ ಸಿದ್ದರಾಮಯ್ಯ ತಪಾಸಣೆ ಮಾಡಿದ ವೈದ್ಯರು ಪ್ರಥಮ ಚಿಕಿತ್ಸೆ​ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net