

ಬೆಂಗಳೂರು: ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಹಾಗೂ ಅಸಮಪರ್ಕ ಮುಂಗಾರು ಮಳೆ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಘೋಷಣೆಯ ಮಾನದಂಡ ಪರಿಷ್ಕರಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಉಚಿತ ಕೋಳಿ ನೀಡುವಂತೆ ಪಟ್ಟು: ನಿರಾಕರಿಸಿದವನಿಗೆ ಮನಬಂದಂತೆ ಚಪ್ಪಲಿಯಿಂದ ಥಳಿತ
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ಗೆ ಈ ಕುರಿತು ಪತ್ರ ಬರೆಯಲಾಗಿದ್ದು, ಮಾನ್ಸೂನ್ ಮಳೆ ಆಧರಿಸಿ ಬರ ಘೋಷಣೆ ಮಾಡಲಾಗುತ್ತದೆ. ಆದರೆ ವಿವಿಧ ರಾಜ್ಯ ಮತ್ತು ಪ್ರದೇಶದಲ್ಲಿ ಮಳೆಯ ಪ್ರಮಾಣ, ವಾತಾವರಣ ಬೇರೆ ಬೇರೆ ರೀತಿ ಇರುತ್ತದೆ. ಹೀಗಾಗಿ ಅಲ್ಲಿನ ಪ್ರದೇಶಗಳು. ಸ್ಥಳೀಯ ಪರಿಸರ ಅಂಶಗಳು, ನೀರಿನ ಲಭ್ಯತೆ ಮತ್ತು ಕೃಷಿ ಪದ್ಧತಿಗಳನ್ನು ಪರಿಗಣಿಸುವ ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವುದು ಮುಖ್ಯ ಸಿಎಂ ಪತ್ರಮುಖೇನ ತಿಳಿಸಿದ್ದಾರೆ.
ಈ ಬಗ್ಗೆ 8 ಅಂಶಗಳುಳ್ಳ ಸಲಹೆಯುಳ್ಳ ಪತ್ರ ಬರೆದ ಸಿಎಂ ಸಿದ್ದರಾಮಯ್ಯ, ಬರಗಾಲ ಘೋಷಣೆಗೆ ಕೇಂದ್ರದ ಈಗಿನ ಬರ ಘೋಷಣೆ ಮಾರ್ಗಸೂಚಿ ಅಡ್ಡಿ ಯಾಗಿದೆ. ಸದ್ಯದ ನಿಯಮಗಳ ಪ್ರಕಾರ ಬರ ಘೋಷಣೆ ಮಾಡಲು ಕೇಂದ್ರದ ನಿಯಾಮಾವಳಿ ಪಾಲನೆ ಕಡ್ಡಾಯವಾಗಿದ್ದು, ಕಡ್ಡಾಯ, ಕಟ್ಟುನಿಟ್ಟಿನ ನಿಯಮಾವಳಿ ಪಾಲಿಸಿದರೆ ಕೆಲವು ತಾಲೂಕುಗಳಿಗೆ ಅನ್ಯಾಯ ಆಗಲಿದೆ. ಹೀಗಾಗಿ ನಿಯಾಮಾವಳಿಗಳ ಸಡಿಲಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ: ವೆಬ್ ಸರಣಿಯಿಂದ ಪ್ರೇರಣೆ: ದಂಪತಿಯ ಪ್ರಾಣ ತೆಗೆದು ಮನೆ ಲೂಟಿ ಮಾಡಿದ ಯುವಕರು..
ರೈತರು ಬಿತ್ತನೆ ಮಾಡಿಲ್ಲವೆಂದು ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ಈ ನಿಯಮಾವಳಿಯೇ ಸರ್ಕಾರಕ್ಕೆ ತಲೆನೋವು ತಂದಿಟ್ಟಿದ್ದು, ಶೇ. 33% ಬೆಳೆಹಾನಿಗೆ ಪರಿಹಾರದ ಅವಕಾಶವಿದೆ ಆದರೆ ಬರಕ್ಕೆ ಶೇ. 50 % ಹಾನಿ ಆಗಬೇಕು ಎಂದಿದ್ದಾರೆ. ಅಲ್ಲದೇ, ಬರ ಘೋಷಣೆಗೆ ಕನಿಷ್ಟೆ ಶೇ.60% ಮಳೆ ಕೊರತೆ ಇರಬೇಕಿದ್ದು, ಕನಿಷ್ಠ ಮೂರು ವಾರಗಳು ಕಡಿಮೆ ಇರದಂತೆ ಮಳೆ ಆಗಿರಬಾರದು ಎಂಬ ನಿಯಮವಿದೆ. ಹಾಗಾಗಿ ಮಳೆ ಕೊರತೆ ಪ್ರಮಾಣವನ್ನು ಶೇ. 60% ರಿಂದ 30%ಕ್ಕೆ ಇಳಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಈ ಕನಿಷ್ಠ ಮಾನದಂಡದ ಅಡಿ ನಿಯಮಾವಳಿಗೆ ತಿದ್ದುಪಡಿಗೆ ಅನುಮತಿಸುವಂತೆ ಮನವಿ ಮಾಡಲಾಗಿದ್ದು, ಕೇಂದ್ರದ ಕೃಷಿ ಇಲಾಖೆ ಅನುಮತಿಸಿದರೆ ಮಾತ್ರ ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಬರ ಘೋಷಣೆ ಅಡಿ ಪರಿಹಾರ ಮತ್ತು ರಿಯಾಯಿತಿ ಪಡೆಯಲು ಸರ್ಕಾರಕ್ಕೆ ಅವಕಾಶ ಸಿಕ್ಕಂತಾಗುತ್ತದೆ. ಹೀಗಾಗಿ ತಮ್ಮ ಕೆಲವು ಸಲಹೆಯನ್ನ ಪರಿಗಣಿಸಿ ಬರ ಘೋಷಣೆಗೆ ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಮನವಿ ಸಲ್ಲಿಸಲಾಗಿದೆ.(ಏಜೆನ್ಸೀಸ್)