More

    ಉಚಿತ ಕೋಳಿ ನೀಡುವಂತೆ ಪಟ್ಟು: ನಿರಾಕರಿಸಿದವನಿಗೆ ಮನಬಂದಂತೆ ಚಪ್ಪಲಿಯಿಂದ ಥಳಿತ

    ಲಲಿತ್​ಪುರ: ಉಚಿತವಾಗಿ ಕೋಳಿ ಮಾಂಸ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಾಪಾರಿಯೊಬ್ಬನಿಗೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿರುವ ಘಟನೆ ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ನಡೆದಿದೆ.

    ಇದನ್ನೂ ಓದಿ: ವೆಬ್ ಸರಣಿಯಿಂದ ಪ್ರೇರಣೆ: ದಂಪತಿಯ ಪ್ರಾಣ ತೆಗೆದು ಮನೆ ಲೂಟಿ ಮಾಡಿದ ಯುವಕರು..

    ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಂತ್ರಸ್ತ ಸುಜನ್ ಅಹಿರ್ವಾರ್ ಎಂಬಾತನನ್ನು ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣವು ನರಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಡೋಂಗ್ರಾಗೆ ಸಂಬಂಧಿಸಿದೆ.

    ಬೈಕ್‌ನಲ್ಲಿ ಗ್ರಾಮದಿಂದ ಗ್ರಾಮಕ್ಕೆ ಕೋಳಿ ಮಾಂಸ ಮಾರಾಟ ಮಾಡುವ ಸುಜನ್ ಅಹಿರ್ವಾರ್ ಎಂಬಾತನನ್ನು ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಗಳ ಗುಂಪು ಕೋಳಿ ನೀಡುವಂತೆ ಕೇಳಿದೆ. ಕೋಳಿಗೆ ಹಣ ಕೊಡುವಂತೆ ಸುಜನ್ ಕೇಳಿದ್ದು, ಆರೋಪಿಗಳು ಆತನಿಗೆ ಚಪ್ಪಲಿಯಿಂದ ತೀವ್ರವಾಗಿ ಥಳಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಸಂತ್ರಸ್ತೆ ಕೈಮುಗಿದು ತನ್ನನ್ನು ಬಿಡುವಂತೆ ಕೇಳಿಕೊಂಡಿದ್ದು ಕೊನೆಗೆ ಆತನನ್ನು ಬಿಟ್ಟು ಕಳುಹಿಸಿದ್ದಾರೆ.

    ದಾರಿಹೋಕರೊಬ್ಬರು ಈ ಘಟನೆಯ ವಿಡಿಯೋ ಮಾಡಿದ್ದು ಇದೀಗ ವೈರಲ್ ಆಗಿದೆ. ಘಟನೆಯ ನಂತರ ಎಚ್ಚೆತ್ತಿರುವ ಪೊಲೀಸರು ಆರೋಪಿಗಳ ವಿರುದ್ಧ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts