ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ: ಸೆ.2ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್​

ವಿಜಯವಾಣಿ (73)
Published on

ಬೆಂಗಳೂರು:  ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್​ ಸೆಪ್ಟಂಬರ್​ 02ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ಇಂದು ಬೆಳಗ್ಗೆ 11 ಗಂಟೆಯಿಂದಲೇ ಆರಂಭವಾದ ಅರ್ಜಿ ವಿಚಾರಣೆಯನ್ನು ಆಲಿಸಿದ ನ್ಯಾಯಾಲಯ ಮಧ್ಯಾಹ್ನ 1:30ಕ್ಕೆ ವಿಚಾರಣೆಯನ್ನು ಒಂದು ಗಂಟೆಗಳ ಕಾಲ ಮುಂದೂಡಿತ್ತು. ತದನಂತರ ಮತ್ತೆ ವಿಚಾರಣೆ ಆರಂಭಿಸಿದ ಹೈಕೋರ್ಟ್ ಸುದೀರ್ಘ ವಿಚಾರಣೆಯ ಬಳಿಕ​ ಇದೀಗ ಸೆಪ್ಟಂಬರ್​ 02ಕ್ಕೆ ಮುಂದೂಡಿದೆ.

ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲರ ಪರ ವಕೀಲರು ವಾದ-ಪ್ರತಿವಾದ ಹೇಗಿತ್ತು? ಇಲ್ಲಿದೆ ವಿವರ:

  • ನ್ಯಾಯಮೂರ್ತಿಗಳು ದಾಖಲೆಗಳ ಪ್ರತಿಗಳನ್ನು ಸದ್ಯಕ್ಕೆ ಕಡತವನ್ನು ನನ್ನ ಬಳಿಯೇ ಇಟ್ಟುಕೊಳ್ಳಬಹುದೇ? ದಯವಿಟ್ಟು ಇದರ ಪ್ರತಿಗಳನ್ನು ಬೇರೆ ಯಾರಿಗೂ ನೀಡದಂತೆ ಮನವಿ, ಸಿಎಂ ಪರ ವಕೀಲರಿಗೆ ಹಾಗೂ ಹೈಕೋರ್ಟ್​ಗೆ ತುಷಾರ್ ಮೆಹ್ತಾ ಮನವಿ.
  • ಕ್ಯಾಬಿನೆಟ್ ಸೂಚನೆಯನ್ನೂ ಏಕೆ ಪಾಲಿಸಿಲ್ಲವೆಂಬುದನ್ನೂ ರಾಜ್ಯಪಾಲರು ಹೇಳಿದ್ದಾರೆ. ಮುಡಾ ಆರೋಪಗಳ ಬಗ್ಗೆಯೂ ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ. 40-60 ಬದಲು 50-50 ಗೆ ನಿಯಮ ಬದಲಾಯಿಸಲಾಗಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಡಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಬಹಳ ಪ್ರತಿಷ್ಟಿತ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ. ಇಷ್ಟೆಲ್ಲಾ ಅಂಶಗಳಿದ್ದರೂ ಕ್ಯಾಬಿನೆಟ್ ತಾರತಮ್ಯಪೂರಿತ ನಿರ್ಣಯ ಕೈಗೊಂಡಿದೆ. ಮಹೀಗಾಗಿ ಕ್ಯಾಬಿನೆಟ್ ಸೂಚನೆ ಪಾಲಿಸದೇ ಸ್ವಂತ ವಿವೇಚನೆ ಬಳಸುತ್ತಿದ್ದೇನೆ. ಹೀಗೆಂದು ರಾಜ್ಯಪಾಲರು ಸ್ಪಷ್ಟವಾಗಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
  • ಮೂರು ಅಂಕಿ ಸಂಖ್ಯೆ ಗಳನ್ನು ದಾಖಲಿಸಿಕೊಳ್ಳಲು ಸ್ನೇಹಮಹಿ ಕೃಷ್ಣ ‌ಪರ ಮಣೀಂದರ್ ಸಿಂಗ್ ಮನವಿ ಮಾಡಿದ್ದು, 3 ಲಕ್ಷ 24 ಸಾವಿರ, 5 ಲಕ್ಷ 98 ಸಾವಿರ, 55 ಕೋಟಿ ಈ ಮೂರು ಅಂಕಿ ದಾಖಲಿಸಿಕೊಳ್ಳಿ ಎಂದಿದ್ದಾರೆ‌ -3ಎಕರೆ 16 ಗುಂಟೆಗೆ 1992ರಲ್ಲಿ ಭೂಸ್ವಾಧೀನವಾಗಿತ್ತು .ಮೇಲ್ನೋಟಕ್ಕೆ ಭ್ರಷ್ಟಾಚಾರವಾಗಿರುವುದನ್ನು ತಿಳಿದುಬರುತ್ತದೆ ಆದರೆ ತಾಂತ್ರಿಕ ಕಾರಣ ನೀಡಿ ಸಮರ್ಥಿಸಬಾರದು ಎಂದಿದ್ದಾರೆ.
  • ಪ್ರದೀಪ್ ಕುಮಾರ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ , ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥ್ ರೆಡ್ಡಿ ವಾದ ಮಂಡನೆ
  • ದೇವರಾಜು ಎಂಬುವರು ಆಗ ಜಮೀನಿನ ಮಾಲೀಕರಲ್ಲ. ಮೈಲಾರಯ್ಯ ಎಂಬುವರಿಗೆ ಹಕ್ಕುಬಿಡುಗಡೆಯಾಗಿತ್ತು ಆದರೂ ದೇವರಾಜು ಎಂಬುವರಿಂದ ಕ್ರಯಕ್ಕೆ ಪಡೆಯಲಾಗಿದೆ. ದೂರುದಾರರ ಪರ ಪ್ರಭುಲಿಂಗ್ ನಾವದಗಿ ವಾದ‌ ಮಂಡನೆ
  • ಈ ಬೆಳವಣಿಗೆ ನಡೆದಾಗಲೆಲ್ಲಾ ಸಿದ್ದರಾಮಯ್ಯ ಡಿಸಿಎಂ ಅಥವಾ ಸಿಎಂ ಆಗಿದ್ದರು.ನಿವೇಶನ ಹಂಚಿಕೆಯಾಗಿದ್ದರಿಂದ ಇವರು ಭೂಮಿಯ ಸ್ವಾಧೀನದಲ್ಲಿ ಇರಲಿಲ್ಲ. ಇಲ್ಲದಿರುವ ಜಮೀನಿಗೆ ಸಿಎಂ ಪತ್ನಿ ಪರಿಹಾರ ಪಡೆದಿದ್ದಾರೆ.
  • 25.10.2021 ರಲ್ಲಿ 50 50 ನಿವೇಶನ ಹಂಚಿಕೆಗೆ ಮನವಿ ಸಲ್ಲಿಸಲಾಯಿತು.ಸಿಎಂ ಪುತ್ರ ಇದ್ದ ಮುಡಾ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.ನಂತರ ಸಿಎಂ ಪತ್ನಿ 25.11.21 ರಲ್ಲಿ ಹಕ್ಕು ಬಿಡುಗಡೆ ಮಾಡಿದರು ನಂತರ ಸಿಎಂ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ ವಕೀಲ ರಂಗನಾಥರೆಡ್ಡಿ ವಾದ.
  • ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net