ಇದೇ ಮೊದಲ ಬಾರಿಗೆ 12,520 ಕೋಟಿ ರೂ. ರೆವಿನ್ಯೂ ಡೆಫಿಸಿಟ್ ಬಜೆಟ್ ಮಂಡಿಸಿದ್ದೇನೆ: ಸಿಎಂ

Untitled design (30)
Published on

ಬೆಂಗಳೂರು: ವಿಧಾನ ಪರಿಷತ್​​ ಕಲಾಪದಲ್ಲಿ ಬಿಜೆಪಿ ಮಾಡಿದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನನ್ನ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 12,520 ಕೋಟಿ ರೂ. ರೆವಿನ್ಯೂ ಡೆಫಿಸಿಟ್ ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

"ಬಿಜೆಪಿಯವರು ನಾವು ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಲ್ಲ ಎಂದು ವ್ಯಂಗ್ಯವಾಡಿದರು. ಹಣ ಎಲ್ಲಿಂದ ತರುತ್ತೀರಾ ಎಂದು ಪ್ರಶ್ನಿಸಿದ್ದರು, ನಾವು ವಾಣಿಜ್ಯ ತೆರಿಗೆ, ಮದ್ಯದ ದರವನ್ನು ಸದ್ಯ ಹೆಚ್ಚಿಸಿದ್ದೇವೆ. ಇದರಿಂದ 13,500 ಕೋಟಿ ರೂ. ಬರುತ್ತದೆ ಮತ್ತು 8 ಸಾವಿರ ಕೋಟಿ ರೂ. ಸಾಲ ಮಾಡುತ್ತೇವೆ" ಎಂದು ಹೇಳಿದರು.

"ನನ್ನ ರಾಜಕೀಯ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ 12,520 ಕೋಟಿ ರೂ. ರೆವಿನ್ಯೂ ಡೆಫಿಸಿಟ್ ಬಜೆಟ್ ಮಂಡಿಸಿದ್ದೇನೆ. ಮುಂದೆ ಸರ್‌ಪ್ಲೆಸ್ ಬಜೆಟ್ ಮಂಡಿಸುವ ವಿಶ್ವಾಸ ಇದೆ" ಎಂದು ಸದನದಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net