‘ಭಾರತ ಭಾಗ್ಯ ವಿಧಾತ’ಗೆ ಜಾಕ್‌ಪಾಟ್ :ಕಂಗನಾ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಮುಂದಾದ ಸಿಎಂ ರೇಖಾ ಗುಪ್ತಾ

ರೇಖಾ ಗುಪ್ತ ಅವರನ್ನು ಅಭಿನಂದಿಸಿದ ಕಂಗನಾ
ರೇಖಾ ಗುಪ್ತ ಅವರನ್ನು ಅಭಿನಂದಿಸಿದ ಕಂಗನಾ
Published on

ಪ್ರಮುಖ ಮುಖ್ಯಾಂಶಗಳು

  • ರಿಲೀಸ್ ಗೆ ಮುನ್ನವೇ ಮೆಚ್ಚುಗೆ ಗಳಿಸಿದ ಭಾರತ್​ ಭಾಗ್ಯ ವಿಧಾತ
  • ದೆಹಲಿ, ಛತ್ತೀಸ್ ಗಢದಲ್ಲಿ ಪ್ರೀಮಿಯರ್ ಶೋ
  • ನವದೆಹಲಿಯಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ರೇಖಾ ಗುಪ್ತಾ
ಸಂಸದೆ, ನಟಿ ಕಂಗನಾ ರಣಾವತ್ ಅಭಿನಯದ ‘ಭಾರತ ಭಾಗ್ಯ ವಿಧಾತ’ ಚಿತ್ರ ನಾಳೆ (ಜೂ.12) ರಿಲೀಸ್ ಆಗುತ್ತಿದೆ. 2008ರ ನ. 26ರಂದು ಮುಂಬೈ ಭಯೋತ್ಪಾದ ದಾಳಿಯ ಸಮಯದಲ್ಲಿ ಆಸ್ಪತ್ರೆಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ‘ಭಾರತ ಭಾಗ್ಯ ವಿಧಾತ’ ಸಿನಿಮಾ ಮೂಡಿಬರುತ್ತಿದೆ. ಬಿಡುಗಡೆ ಮುನ್ನವೇ ಚಿತ್ರತಂಡ ನವದೆಹಲಿ ಮತ್ತು ಛತ್ತೀಸ್‌ಗಢದ ರಾಯಪುರದಲ್ಲಿ ಪ್ರೀಮಿಯರ್ ಶೋ ನಡೆಸಿದೆ. ಆಯಾ ರಾಜ್ಯದ ಮುಖ್ಯಮಂತ್ರಿ, ಸಚಿವರು ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಚಿತ್ರ ವೀಕ್ಷಿಸಿದ ಸಿಎಂ ರೇಖಾ ಗುಪ್ತಾ, ಕಂಗನಾ ರಣಾವತ್ ನಟನೆಗೆ ಫುಲ್ ಮಾರ್ಕ್ಸ್ ನೀಡುವುದಲ್ಲದೇ, ದೆಹಲಿಯಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಉದ್ದೇಶಿಸಿದ್ದಾರೆ. ‘‘ಭಾರತ ಭಾಗ್ಯ ವಿಧಾತ’ ರೋಚಕ ಚಿತ್ರವಾಗಿದ್ದು, ಅದರ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ. ಭಾರತೀಯರ ಮಾನವೀಯತೆಯನ್ನು ಸಿನಿಮಾ ಪ್ರಸ್ತುತಪಡಿಸಿದೆ. ಹಾಗೆಯೇ, 15 ನರ್ಸ್‌ಗಳು ಪ್ರಾಣಾಪಾಯ ಲೆಕ್ಕಿಸದೆ 400 ಜನರನ್ನು ರಕ್ಷಿಸುವ ಕಥೆಯಿದು. ಕಂಗನಾ ರಣಾವತ್ ಚಾತುರ್ಯದಿಂದ ಅಭಿನಯಿಸಿದ್ದಾರೆ. ಇಡೀ ದೇಶದ ಜನ ಈ ಚಿತ್ರವನ್ನು ನೋಡುವಂತೆ ಮನವಿ ಮಾಡುತ್ತೇನೆ. ಜತೆಗೆ ದೆಹಲಿಯಲ್ಲಿ ‘ಭಾರತ ಭಾಗ್ಯವಿಧಾತ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಉದ್ದೇಶಿಸಿದ್ದೇವೆ’ ಎಂದು ಘೋಷಿಸಿದ್ದಾರೆ. ತೆರಿಗೆ ವಿನಾಯಿತಿ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ. ಮನೋಜ್ ತಪಾಡಿಯಾ ನಿರ್ದೇಶನದ ಈ ಚಿತ್ರದಲ್ಲಿ ಕಂಗನಾ ಜತೆಗೆ ಗಿರಿಜಾ ಓಕ್, ಸ್ಮಿತಾ ದುಬೆ, ಅಮೃತಾ ನಾಮ್‌ದೇವ್, ಇಶಾ ದುಬೆ ಪ್ರಮುಖ ಪಾತ್ರದಲ್ಲಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net