ಸತತ 9 ಗಂಟೆ ಸಭೆ ನಡೆಸಿದ ಸಿಎಂ

CM Siddaramaiah
Published on

ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ.ಶಿವಕುಮಾರ್ ಅವರು ಸತತ 9 ಗಂಟೆಗಳ ಕಾಲ ಜಿಲ್ಲಾಡಳಿತದ ಸಭೆ ನಡೆಸುವ ಮೂಲಕ ಆಡಳಿತ ಯಂತ್ರದ ಮೇಲೆ ಇನ್ನಷ್ಟು ಬಿಗಿ ಸಾಧಿಸುವ ಪ್ರಯತ್ನ ಮಾಡಿದರು.
ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮತ್ತು ಉಸ್ತುವಾರಿ ಅಧಿಕಾರಿಗಳ ಸಭೆಯಲ್ಲಿ ಬೆಳಿಗ್ಗೆ 10.30ಕ್ಕೆ ಸಭೆಯನ್ನು ಪ್ರಾರಂಭಿಸಿದ ಸಿಎಂ, ಮದ್ಯಾಹ್ನ 2.20 ತನಕ ಸಭೆ ನಡೆಸಿದರು. 40 ನಿಮಿಶ ಊಟದ ವಿರಾಮದ ಬಳಿಕ ಮತ್ತೆ 3 ಗಂಟೆಗೆ ಸಭೆ ಪ್ರಾರಂಭಿಸಿದ ಸಿಎಂ ಸಭೆ ಮುಗಿಸಿದಾಗ ರಾತ್ರಿ 8.15 ಆಗಿತ್ತು. ಸತತವಾಗಿ 9 ಗಂಟೆ ಸಭೆ ನಡೆಸಿದ ಸಿಎಂ ಒಂದಿಷ್ಟು ಬಳಲಿಲ್ಲ. ವಿಶ್ರಾಂತಿಯನ್ನು ತೆಗೆದುಕೊಳ್ಳಲಿಲ್ಲ.

ಅಧಿವೇಶನ ಹಿನ್ನೆಲೆಯಲ್ಲಿ ಸಭೆಗೆ ಮಹತ್ವ
ಮಳೆಗಾಲದ ವಿಧಾನಸಭೆ ಅಧಿವೇಶನ ಜು.15ರಿಂದ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು ಮತ್ತು ಅಧಿವೇಶನದಲ್ಲಿ ವಿರೋಧ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಜ್ಜಾಗಲು ಈ ಸಭೆ ಮಹತ್ವದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net