

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಂದ ನೋಟಿಸ್ ಪಡೆದು ತೀವ್ರ ಗೊಂದಲಕ್ಕೆ ಸಿಲುಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಜತೆಯತ್ತ ಮರಳಲು ಪ್ರಯತ್ನಿಸಿದ್ದಾರೆ.
ಬುಧವಾರ ಮೈಸೂರಿನಲ್ಲಿದ್ದ ಅವರು ಅಲ್ಲಿನ ಕಾರ್ಯಕಲಾಪ ಮುಂದೂಡಿ ನೇರ ಬೆಂಗಳೂರಿಗೆ ಆಗಮಿಸಿ ಕಡತ ವಿಲೇವಾರಿಯಲ್ಲಿ ತೊಡಗಿಕೊಂಡರು.
ಕಳೆದ ಒಂದು ವಾರದಿಂದಲೂ ತೀವ್ರ ಚಡಪಡಿಕೆಯಲ್ಲಿದ್ದ ಅವರು, ಅನೇಕ ಕಾರ್ಯಕ್ರಮಗಳನ್ನು ಮುಂದೂಡಿದ್ದರು. ಮುಡಾ ವಿಚಾರದಲ್ಲಿ ತಾವೇ ಸ್ಪಷ್ಟನೆ ಕೊಡಲು ಮಾಧ್ಯಮದ ಮುಂದೆ ಧಾವಿಸಿ ರಾಜಭವನ ಹಾಗೂ ಕೇಂದ್ರ ಸರ್ಕಾರದ ವಿರುದ್ಧವೂ ಹರಿಹಾಯ್ದಿದ್ದರು. ತಮ್ಮ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ ಎಂದು ಹರಿಹಾಯ್ದಿದ್ದರು.
ರಾಜಭವನದಿಂದ ಏನಾದರೂ ಸಂದೇಶ ಬಂದುಬಿಡಹುದೆಂಬ ಅಳುಕಲ್ಲಿ ಪೂರ್ವ ಕಾರ್ಯಕ್ರಮವನ್ನು ರದ್ದುಪಡಿಸಿದ್ದರು. ಸಭೆ ನಡೆಸುವುದನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕಿದ್ದರು. ಇದೀಗ ರೆಡಿ ಾರ್ ಆ್ಯಕ್ಷನ್ ರೀತಿ ಪ್ರಗತಿ ಪರಿಶೀಲನಾ ಸಭೆ ನಡೆಸುವುದಕ್ಕೆ ತಯಾರಾಗಿದ್ದಾರೆ.