ಸಿಎಂ ಸಿದ್ದರಾಮಯ್ಯ ಹೊಸ ಸಂಶೋಧನೆಗೆ ಇಳಿದಿದ್ದಾರೆ: ವಿಪಕ್ಷ ನಾಯಕ ಆರ್​. ಅಶೋಕ ವ್ಯಂಗ್ಯ

Untitled design - 2024-06-29T161658.236
Published on

ಬೆಂಗಳೂರು: ರಾಜ್ಯದಲ್ಲಿ ತೈಲ, ಹಾಲಿನ ದರ ಏರಿಕೆಯ ಹಿನ್ನೆಲೆ ರಾಜ್ಯ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್​.ಅಶೋಕ, ಕಾಂಗ್ರೆಸ್​ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

"ಇಂಧನ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ ರಾಜ್ಯದ ಜನರ ನೆಮ್ಮದಿಗೆ ಕೊಳ್ಳಿಯಿಟ್ಟಿರುವ ಸಿಎಂ ಸಿದ್ದರಾಮಯ್ಯನವರು ಹೊಸ ಸಂಶೋಧನೆಗೆ ಇಳಿದಿದ್ದಾರೆ. 25 ಸಾವಿರ ಎಕರೆ ಸಾರ್ವಜನಿಕ ಆಸ್ತಿ ಅಡವಿಡಲು ಆಳ ಅಧ್ಯಯನ ನಡೆಸಿದ ಕಾಂಗ್ರೆಸ್ ಸರ್ಕಾರ ಈಗ ಬಸ್ ಪ್ರಯಾಣ ದರ ಸೇರಿ ಬೆಲೆ ಏರಿಕೆಗೆ ಇನ್ನೇನಾದರೂ ಉಳಿದಿದೆಯಾ? ಅಂತ ದುರ್ಬಿನ್ ಹಾಕಿಕೊಂಡು ಶೋಧನೆಯಲ್ಲಿ ತೊಡಗಿದೆ" ಎಂದು ವ್ಯಂಗ್ಯವಾಡಿದ್ದಾರೆ.

"ಕಾಂಗ್ರೆಸ್ ಅಂದರೆ ಜನರ ಜೇಬಿಗೆ ಕತ್ತರಿ ಖಚಿತ. ಕರುನಾಡು ದಿವಾಳಿ ಖಂಡಿತ ಹಾಗೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಕನ್ನಡಿಗರು ದಂಗೆ ಏಳುವುದು ನಿಶ್ಚಿತ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net