ಚೆಕ್ ಪೋಸ್ಟ್ ನಲ್ಲಿ ಸಿಎಂ‌ ಕಾರು ತಪಾಸಣೆ

IMG-20240331-WA0017
Published on

ಕೋಲಾರ: ಖಾಸಗಿ ಕಾರ್ಯ ನಿಮ್ಮಿತ ಕೋಲಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರನ್ನು ತಾಲೂಕಿನ ರಾಮಸಂದ್ರ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಸಿಬ್ಬಂದಿ ಭಾನುವಾರ ತಪಾಸಣೆ ನಡೆಸಿದರು.

ಲೋಕಸಭಾ ಚುನಾವಣೆಯ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಚುನಾವಣಾ ಕಣ್ಗಾವಲು ತಂಡ, ಜಿಲ್ಲೆಯ ರಾಮಸಂದ್ರ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು ತಡೆದು ತಪಾಸಣೆಗೆ ಒಳಪಡಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಗಮಿಸುತ್ತಿದ್ದ ಸಿದ್ದರಾಮಯ್ಯ ಕಾರನ್ನು ಕೋಲಾರ ಜಿಲ್ಲೆಯ ಅಂಚಿನಲ್ಲಿ ಸ್ಥಾಪಿಸಲಾದ ರಾಮಸಂದ್ರ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆಗೆ ಒಳಪಡಿಸಿದರು. ಇದಕ್ಕೆ ಸಿಎಂ ಸಿದ್ದರಾಮಯ್ಯ, ಬೈರತಿ ಸುರೇಶ್ ಸಂಪೂರ್ಣ ಸಹಕಾರ ನೀಡಿದರು.
ಮಾಲೂರು ಶಾಸಕ‌ ಕೆ.ವೈ.ನಂಜೇಗೌಡ ತಮ್ಮ ತಮ್ಮನ ಮಗಳ ಮಧುವೆ ಅರತಕ್ಷೆತೆಗೆ ಆಗಮಿಸಿದ ಸಿಎಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net