ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ; ಸಿಎಂ ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಹೀಗಿವೆ

ವಿಜಯವಾಣಿ (60)
Published on

ಚಾಮರಾಜನಗರ: ಇಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡರು. ಸಿಎಂ ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಹೀಗಿವೆ ಗಮನಿಸಿ.

ಪ್ರಮುಖ ಘೋಷಣೆಗಳು

  • 3647 ಕೋಟಿ 42 ಲಕ್ಷ ಮೌಲ್ಯದ ಕಾಮಗಾರಿಗೆ ಕ್ಯಾಬಿನೆಟ್ ಅಂಗೀಕಾರ.
  • PWD, ಬೃಹತ್-ಸಣ್ಣ ನೀರಾವರಿ ಇಲಾಖೆ, ಇಂಧನ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಬುಡಕಟ್ಟು ಅಭಿವಧ್ಧಿ, ಟ್ರೈಬಲ್ ಹಳ್ಳಿಗಳಿಗೆ ರಸ್ತೆಗಳು.
  • 1787 ಕೋಟಿ ರೂ. ನೀರಾವರಿ, ಎಸ್ಸಿ/ಎಸ್ಟಿ ಜನರ ವಸತಿ, ಕೇರಿಗಳಿಗೆ ಮೂಲಭೂತ ಸೌಕರ್ಯ ಪೂರೈಕೆ.
  • ಮಾನವ-ಪ್ರಾಣಿ ಸಂಘರ್ಷ ತಡೆಯಲು 210 ಕೋಟಿ ರೂ. ರೈಲ್ವೇ ಬ್ಯಾರಿಕೇಡ್ ಪೂರ್ಣಗೊಳಿಸಲಾಗುವುದು.
  • ಕುಡಿಯುವ ನೀರಿಗಾಗಿ 315 ಕೋಟಿ ರೂ., ಆರೋಗ್ಯ ಸುಧಾರಣೆಗೆ 228 ಕೋಟಿ ರೂ., ಕೊಳ್ಳೇಗಾಲದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಅಂಗೀಕಾರ. 250 ಬೆಡ್​ಗಳ ಜಿಲ್ಲಾಸ್ಪತ್ರೆ.
  • ಪ್ರವಾಸೋದ್ಯಮ ಇಲಾಖೆಗೆ 300 ಕೋಟಿ ರೂ.
  • ಹನೂರಿನಲ್ಲಿ ಹೊಸ ತಾಲ್ಲೂಕಿಗೆ ತಾಲ್ಲೂಕಾ ಆಸ್ಪತ್ರೆ, ತಾಲ್ಲೂಕಾ ಭವನ ನಿರ್ಮಾಣ
  • ಚಿಕ್ಕಲ್ಲೂರಿನಲ್ಲಿ ರಾಜಪ್ಪಾಜಿ, ಸಿದ್ದಪ್ಪಾಜಿ, ಮಂಟೇಸ್ವಾಮಿ ಅಭಿವೃದ್ಧಿ ಕೇಂದ್ರ.
  • ವರುಣಾದ ಇಳಿಯಾಲದಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ ಜಾಗ ಕೊಡಲು ಅಂಗೀಕಾರ
  • 40 ಕೋಟಿ ರೂ. ಅಂದಾಜಿನಲ್ಲಿ ಬದನವಾಳು ಅಭಿವೃದ್ಧಿ.
  • ಮೈಸೂರಿನ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 101 ಕೋಟಿ ರೂ. ಮೊತ್ತದ ಜಾಗ ನೀಡಲಾಗುವುದು.
  • ಮೈಸೂರಿನ ಅಟಾರ್ಹಾ ಕಚೇರಿಯ 100 ಕೋಟಿ ರೂ. ವೆಚ್ಚದ ಮ್ಯೂಸಿಯಂ ನಿರ್ಮಾಣಕ್ಕೆ ಒಪ್ಪಿಗೆ.
  • ಗುಂಡ್ಲುಪೇಟೆ 110 ಕೆರೆಗಳಿಗೆ ನೀರು ತುಂಬಿಸುವ 475 ಕೋಟಿ ರೂ. ವೆಚ್ಚ.
  • ಚಾಮರಾಜನಗರದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ, ಚಾಮರಾಜನಗರ ಟೌನ್​ನಲ್ಲಿ ಕುಡಿಯುವ ನೀರು, ಒಳ ಚರಂಡಿ ನಿರ್ಮಾಣ.
  • ಚಾಮರಾಜನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 15 ಕೋಟಿ ರೂ.
  • ಒಟ್ಟಾಗಿ, 3647.62 ಕೋಟಿ ರೂ. ವೆಚ್ಚದಲ್ಲಿ ಮೈಸೂರು ವಿಭಾಗದಲ್ಲಿ ತುರ್ತು ಅಭಿವೃಧ್ಧಿ ಕಾರ್ಯಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net