ಪ್ರಯಾಣದ ದರ ದುಬಾರಿ ಸುಳಿವು

siddaramaiah
Published on


ಬೆಂಗಳೂರು: ಬಸ್ ಪ್ರಯಾಣ ದರ ಏರಿಸದೇ ಎಷ್ಟು ವರ್ಷ ಆಗಿದೆ ಗೊತ್ತೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರನ್ನೇ ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಸ್ ಪ್ರಯಾಣ ದರ ಏರಿಸುವ ಚಿಂತನೆ ಇದೆಯೇ ಎಂದು ಪ್ರಶ್ನಿಸಿದಾಗ, ಈ ಬಗ್ಗೆ ಇಲಾಖೆ ಜತೆ ಚರ್ಚೆ ಮಾಡುತ್ತೇನೆ ಎಂದರು. ಬಳಿಕ ಪ್ರಯಾಣ ದರ ಏರಿಸಲ್ಲ ಎಂದು ಖುರ್ಚಿಯಿಂದೆದ್ದು ಹೊರಟರು.

ಪೆಟ್ರೋಲ್​- ಡೀಸೆಲ್​ ತೆರಿಗೆ ಏರಿಸಿದ ಬಳಿಕ ಖಾಸಗಿ ಬಸ್​ ಮಾಲಿಕರು ಪ್ರಯಾಣ ದರ ಏರಿಸುವಂತೆ ಪಟ್ಟುಹಿಡಿದಿದ್ದಾರೆ. ಇನ್ನೊಂದೆಡೆ ಕೆಎಸ್​ಆರ್​ಟಿಸಿ ಬಸ್​ ಪ್ರಯಾಣ ದರ ಪರಿಷ್ಕರಿಸದೇ ಬಹಳ ವರ್ಷವಾಗಿದೆ ಎಂದು ಸಾರಿಗೆ ಸಚಿವರೇ ಹೇಳಿಕೆ ನೀಡಿದ್ದರು. ಇದೀಗ ಅಂತಿಮವಾಗಿ ಮುಖ್ಯಮಂತ್ರಿಯವರು ನಿರ್ಧಾರ ಮಾಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net