ಶಿಗ್ಗಾಂವಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ

CM Bommai
Published on

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಲ್ಲಿಂದು (ಏಪ್ರಿಲ್​ 15) ಸಾಂಕೇತಿಕವಾಗಿ ನಾಮಪತ್ರವನ್ನು ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಶಿಗ್ಗಾಂವಿ ಅಭ್ಯರ್ಥಿಯಾಗಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಈ ಹಿಂದೆಯೂ ಜನರಿಂದ ಅಭೂತಪೂರ್ಣ ಬೆಂಬಲ ಸಿಕ್ಕಿದೆ. ಈ ಬಾರಿಯು ಶಿಗ್ಗಾಂವಿಯಿಂದ ಮತ್ತೊಮ್ಮೆ ಆಯ್ಕೆ ಬಯಿಸಿ ನಾಮಪತ್ರ ಸಲ್ಲಿಸಿದ್ದೇನೆ. ಈ ಬಾರಿ ಎಲ್ಲ ದಾಖಲೆಗಳನ್ನು ಮುರಿದು ಅತ್ಯಧಿಕ ಮತಗಳ ಅಂತರದಿಂದ ಗೆಲುವು ತಂದುಕೊಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಈಗ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಮತ್ತೊಮ್ಮೆ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರವನ್ನು ಸಲ್ಲಿಸುತ್ತೇನೆ ಎಂದರು. ಬಿಜೆಪಿಯಲ್ಲಿ ಎದ್ದಿರುವ ಬಂಡಾಯದ ವಿಚಾರವಾಗಿ ಪ್ರತಿಕ್ರಿಯಿಸಿ, ಆಡಳಿತ ಪಕ್ಷವು ಹಲವು ಹಾಲಿ ಶಾಸಕರನ್ನು ತೆಗೆದಾಗ ಬಂಡಾಯ ಏಳುವುದು ಸಹಜ. ಕೊನೆಯ ಪಟ್ಟಿ ಬಿಡುಗಡೆಯಾಗಲಿದೆ. ಆ ಬಳಿಕ ಎಲ್ಲವೂ ಶಮನ ಆಗುತ್ತದೆ ಎಂದು ಹೇಳಿದರು.

ಎದುರಾಳಿ ಯಾರೇ ಬರಲಿ ಚುನಾವಣೆ ಅಂದರೆ ಕುಸ್ತಿ ಎಂದ ಸಿಎಂ ಬೊಮ್ಮಾಯಿ, ನೆಹರು ಓಲೇಕಾರ ಆರೋಪಕ್ಕೆ ಪ್ರತಿಕ್ರಿಯಿಸಿ, ನನ್ನ ವಿರುದ್ಧದ ಆರೋಪ ಮಾಡಿದ್ದನ್ನು ಸಾಬೀತು ಮಾಡಲಿ ಎಂದು ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net