ರಾಜಭವನದ ಚಹಾಕೂಟದಲ್ಲಿ ಸಿಎಂ ಭಾಗಿ

siddaramaiah
Published on

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗುರುವಾರ ಸಂಜೆ ರಾಜಭವನದಲ್ಲಿ ಹಮ್ಮಿಕೊಂಡ ಚಹಾಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಅಕ್ರಮ ವಿಚಾರವಾಗಿ ಎರಡು ವಾರದ ಹಿಂದೆ ಮುಖ್ಯಮಂತ್ರಿಯವರಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದು ರಾಜಕೀಯವಾಗಿ ಸಾಕಷ್ಟು ಸದ್ದು ಮಾಡಿತ್ತು, ತೀವ್ರ ಚರ್ಚೆಗೂ ಗ್ರಾಸವಾಗಿತ್ತು. ಹೀಗಾಗಿ ಗುರುವಾರದ ರಾಜಭವನ ಭೇಟಿಗೂ ಮಹತ್ವ ಇತ್ತು.

ರಾಜಭವನದಲ್ಲಿ ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡ ರಾಜ್ಯಪಾಲರು ಉಭಯ ಕುಶಲೋಪರಿ ನಡೆಸಿದರು. ಬಳಿಕ ಚಹಾಕೂಟ ಆಯೋಜನೆಗೊಂಡ ಗಾಜಿನ ಅರಮನೆಗೆ ಮುಖ್ಯಮಂತ್ರಿಯವರನ್ನು ಕರೆದೊಯ್ದರು. ಬಳಿಕ ಇಬ್ಬರೂ ವೇದಿಕೆ ಅಲಂಕರಿಸಿದ್ದರು.

ಚಹಾಕೂಟದಲ್ಲಿ, ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ನಗರ ಪೊಲೀಸ್ ಆಯುಕ್ತ ದಯಾನಂದ್, ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿ ಹಿರಿಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net