ಮೀಸಲಾತಿ ಏರಿಕೆ ಪ್ರಸ್ತಾಪಿಸಿ ಸಿಎಂ ದಾರಿ ತಪ್ಪಿಸಲು ಪ್ರಯತ್ನ: ಸಂಸದ ಪಿ.ಸಿ.ಮೋಹನ್ ಟೀಕೆ | Caste census ignored when congress was in power

MP press meet
Published on

ಬೆಂಗಳೂರು: ಮೀಸಲಾತಿಯನ್ನು ಶೇಕಡ 50ಕ್ಕೆ ಸುಪ್ರೀಂ ಕೋರ್ಟ್ ಮಿತಿಗೊಳಿಸಿದೆ. ಈ ಪ್ರಮಾಣವನ್ನು ಹೆಚ್ಚಿಸಲಾಗದು ಎಂದು ಗೊತ್ತಿದ್ದರೂ ಮೀಸಲಾತಿ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿ, ರಾಜ್ಯದ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಟೀಕಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲು ಏರಿಕೆಗೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದು, ರಾಜ್ಯದ ಜನರಿಗೆ ಮೋಸ ಮಾಡಲು ಮಾಡುತ್ತಿದ್ದಾರೆ ಎಂದರು ದೂರಿದರು.

ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಒತ್ತಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಜನಗಣತಿ ಜತೆಗೆ ಜಾತಿಗಣತಿಗೆ ನಿರ್ಧರಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ದೇಶದಲ್ಲಿ ಕಾಂಗ್ರೆಸ್ 60 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ಆಗ ಜಾತಿ ಗಣತಿ ನಡೆಸಬೇಕೆಂಬ ಬುದ್ಧಿ ಬರಲಿಲ್ಲವೇಕೆ ?. ಮನಮೋಹನ್ ಸಿಂಗ್ ನೇತೃತ್ವದಲ್ಲಿ ಯುಪಿಎ 10 ಅಧಿಕಾರದಲ್ಲಿತ್ತು. ರಾಹುಲ್ ಗಾಂಧಿಯವರು ಜಾತಿ ಗಣತಿ ಮಾಡಿಸಲಿಲ್ಲವೇಕೆ ? ಸಿಎಂ ಸಿದ್ದರಾಮಯ್ಯ ಈ ಬಗ್ಗೆ ತಮ್ಮ ನಾಯಕನನ್ನು ಪ್ರಶ್ನಿಸಲಿ ಎಂದು ಪಿ.ಸಿ.ಸವಾಲೆಸೆದರು.

ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಯಾವತ್ತೂ ದಲಿತರಿಗೆ ಮೋಸ ಮಾಡಿದೆ. ಎಂಟು ಬಾರಿ ಸಂಸದರಾಗಿದ್ದ ಬಾಬು ಜಗಜೀವನರಾಂ ಪ್ರಧಾನಿಯಾಗುವುದನ್ನು ಕಾಂಗ್ರೆಸ್ ತಪ್ಪಿಸಿದ್ದನ್ನು ನೆನಪಿಸಿದರು.

ಜಾತಿ ಗಣತಿಗೆ 500 ಕೋಟಿ ರೂ. ಸಾಕಾಗದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಜಾತಿ ಗಣತಿ ನಿರ್ಧಾರಕ್ಕೆ ಬದ್ಧವಾಗಿದೆ. ಹೆಚ್ಚುವರಿ ಮೊತ್ತ ಬೇಕಾದಾಗ ಒದಗಿಸಲಿದೆ ಎಂದು ಪಿ.ಸಿ.ಮೋಹನ್ ವಿಶ್ವಾಸ ವ್ಯಕ್ತಪಡಿಸಿದರು.

ಜಂಗಲ್ ರಾಜ್ಯ

ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಇರುವ ಬಗ್ಗೆಯೇ ಪ್ರಶ್ನಿಸುವಂತಾಗಿದೆ. ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯು ಕಾನೂನು-ಸುವ್ಯವಸ್ಥೆ ಬಿಗಡಾಯಿಸಿರುವುದನ್ನು ಎಂದು ಕಳವಳ ವ್ಯಕ್ತಪಡಿಸಿದರು.

ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಇದೊಂದು ದೊಡ್ಡ ಸವಾಲಾಗಿದೆ. ಲಾರಿ ತಂದು ಅಪಘಾತ ಮಾಡಿ ಲಾಂಗು, ಮಚ್ಚುಗಳಿಂದ ಸುಹಾಸ್‌ರನ್ನು ದುಷ್ಕರ್ಮಿಗಳು ಕೊಂದಿದ್ದು, ಪೊಲೀಸ್ ಇಲಾಖೆ ಇದ್ದೂ ಪ್ರಯೋಜನವಿಲ್ಲದಂತಾಗಿದೆ ಎಂದು ಟೀಕಿಸಿದರು.

ಮಂಗಳೂರಿನಲ್ಲಿ ಈ ಹಿಂದೆ ಕುಕ್ಕರ್ ಬಾಂಗ್ ಸ್ಫೋಟವಾದಾಗ ಡಿ.ಕೆ.ಶಿವಕುಮಾರ್ ಅವರು ನನ್ನ ಸೋದರರು ಎಂದಿದ್ದರು. ಈ ರೀತಿಯ ಮೈ ಬ್ರದರ್ಸ್ ನೀತಿ ಕರ್ನಾಟಕಕ್ಕೆ ಶಾಪವಾಗುತ್ತಿದೆಯೆ ? ಎಂದು ಎನ್.ರವಿಕುಮಾರ್ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net