ನೇಕಾರರ ಖಾತೆಗೇ ನೇರ ರವಾನೆ ಆಗಲಿದೆ 5 ಸಾವಿರ ರೂಪಾಯಿ; ಹೊಸ ಯೋಜನೆ ಘೋಷಿಸಿದ ಸಿಎಂ

CMBommai
Published on

ಬೆಂಗಳೂರು: ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ವಿದ್ಯುತ್ ಮಗ್ಗ ಹಾಗೂ ಮಗ್ಗಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ನೇಕಾರರು ಹಾಗೂ ಕಾರ್ಮಿಕರಿಗೆ 5000 ರೂ. ವಾರ್ಷಿಕ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮುಖಾಂತರ ಒದಗಿಸಲು 2022-23ನೇ ಸಾಲಿನಿಂದ “ನೇಕಾರ ಸಮ್ಯಾನ್ (ವಿದ್ಯುತ್ ಮಗ್ಗ)" ಹೊಸ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

2020-21ನೇ ಸಾಲಿನಲ್ಲಿ ಕೋವಿಡ್-19 ಸಂಕಷ್ಟದ ಪ್ರಯುಕ್ತ 51,862 ವಿದ್ಯುತ್ ಮಗ್ಗ ನೇಕಾರರಿಗೆ 2,000 ರೂಪಾಯಿಯಂತೆ ಒಟ್ಟು 1037.24 ಲಕ್ಷ ರೂಪಾಯಿ ಡಿಬಿಟಿ ಮೂಲಕ ಬಿಡುಗಡೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ಕೋವಿಡ್-19 ಎರಡನೇ ಅಲೆಯ ಸಂಕಷ್ಟದ ಪ್ರಯುಕ್ತ 85,718 ವಿದ್ಯುತ್ ಮಗ್ಗ ನೇಕಾರರಿಗೆ 3,000 ರೂಪಾಯಿಯಂತೆ ಒಟ್ಟು 2571.54 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.

ಆ ಬಳಿಕ ವಿದ್ಯುತ್ ಮಗ್ಗ ಹಾಗೂ ಮಗ್ಗಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ನೇಕಾರರು, ಕಾರ್ಮಿಕರ ಮಾಹಿತಿ ಕ್ರೋಡೀಕರಿಸಲು ಇಲಾಖೆಯಿಂದ ಗಣತಿ, ಸಮೀಕ್ಷೆ ಕೈಗೊಳ್ಳಲಾಗಿದೆ. ಆ ಪ್ರಕಾರ ಇದುವರೆಗೆ ನೋಂದಾಯಿತ ಸುಮಾರು 1,02,980 ನೇಕಾರರು/ಕಾರ್ಮಿಕರಿಗೆ ತಲಾ 5000 ರೂಪಾಯಿಯಂತೆ ವಾರ್ಷಿಕ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮುಖಾಂತರ ವರ್ಗಾಯಿಸಲು ಈ ದಿನ ಚಾಲನೆ ನೀಡಲಾಗುತ್ತಿದೆ ಸರ್ಕಾರ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net