

ಬೆಂಗಳೂರು: ಇಂದು(07-07-23) 14ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ ಸಿಎಂ ಸಿದ್ದರಾಮಯ್ಯ, ಬಜೆಟ್ನಲ್ಲಿ ನಮ್ಮ ಮೆಟ್ರೋ ಇಲಾಖೆಗೆ 30,000 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಿದ್ದಾರೆ.
ರಾಜ್ಯ ಬಜೆಟ್ನಲ್ಲಿ 3.27 ಲಕ್ಷ ಕೋಟಿ ರೂ.ಗೂ ಹೆಚ್ಚು ವೆಚ್ಚದ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದರು ಮತ್ತು ನಮ್ಮ ಮೆಟ್ರೋಗೆ 30,000 ಕೋಟಿ ರೂ. ಅನುದಾನ ಕೊಡುವುದಾಗಿ ಹೇಳಿದರು. ಈ ಮಧ್ಯೆ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳನ್ನು ಪೂರೈಸಲು ವಾರ್ಷಿಕ ಅಂದಾಜು 52,000 ಕೋಟಿ ರೂ. ವೆಚ್ಚ ತಗಲುತ್ತದೆ ಎಂದು ಸಿಎಂ ಹೇಳಿದರು.
ಚುನಾವಣಾ ಪೂರ್ವ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದರ ಕುರಿತು ಬಜೆಟ್ನಲ್ಲಿ ಮಾತನಾಡಿದ ಸಿಎಂ, ಈ ಯೋಜನೆಗಳಿಂದ 1.3 ಕೋಟಿ ಕುಟುಂಬಗಳಿಗೆ ಪ್ರಯೋಜನ ದೊರೆಯುತ್ತದೆ ಎಂದು ಹೇಳಿದರು. ಬಜೆಟ್ನಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 20% ರಷ್ಟು ಹೆಚ್ಚಿಸಿದ್ದು, ಸದ್ಯ ಮದ್ಯದ ದರ ಈಗ ಮತ್ತಷ್ಟು ದುಬಾರಿಯಾಗಲಿದೆ. ಆಹಾರ ಇಲಾಖೆಗೆ 10,460 ಕೋಟಿ ರೂ., ಇಂದಿರಾ ಆಹಾರ ಕ್ಯಾಂಟೀನ್‌ಗೆ 100 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 24,166 ಕೋಟಿ ರೂ. ಹಣವನ್ನು ಮುಖ್ಯಮಂತ್ರಿಗಳು ಇಂದಿನ ಬಜೆಟ್ನಲ್ಲಿ ಘೋಷಿಸಿದ್ದಾರೆ,(ಏಜೆನ್ಸೀಸ್).