ನಟನದಲ್ಲಿ ಮತ್ತೆ ಮುಖ್ಯಮಂತ್ರಿ

Drama-games
Published on


ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಸೆ. 22ರಂದು ಸಂಜೆ 6.30ಕ್ಕೆ ಕಲಾ ಗಂಗೋತ್ರಿ, ಬೆಂಗಳೂರು ಅಭಿನಯಿಸುವ ರಾಜಕೀಯ ನಾಟಕ ‘ಮತ್ತೆ ಮುಖ್ಯಮಂತ್ರಿ’ ಪ್ರದರ್ಶನವಾಗಲಿದೆ.
ಕನ್ನಡ ನಾಡು ಕಂಡ ಅಪರೂಪದ ಕಲಾವಿದ, ಚಿಂತಕ ಮುಖ್ಯಮಂತ್ರಿ ಚಂದ್ರು ಅವರು ಪ್ರಧಾನ ಪಾತ್ರದಲ್ಲಿರುವ ಬಹು ವಿಶಿಷ್ಟ ನಾಟಕ ಇದು. ನಾಟಕ ರಚನೆ ಡಾ.ಕೆ.ವೈ.ನಾರಾಯಣಸ್ವಾಮಿ ಹಾಗೂ ನಿರ್ದೇಶನ ಡಾ.ಬಿ.ವಿ.ರಾಜಾರಾಂ ಅವರದು.
ಇದೊಂದು ರಾಜಕೀಯ ಆತ್ಮಾವಲೋಕನದ ನಾಟಕ. ನಮ್ಮ ದೇಶದಲ್ಲಿ ಕಳೆದ 75 ವರ್ಷಗಳಿಂದ ನಡೆದು ಬರುತ್ತಿರುವ ರಾಜಕೀಯ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ನಡೆಸಿರುವ ಪ್ರಯತ್ನವಿದು. ಭ್ರಷ್ಟಾಚಾರ, ಸ್ವಾರ್ಥ, ಹಗೆತನಗಳಿಂದ ತುಂಬಿಕೊಂಡಿರುವ ರಾಜಕೀಯ ವರ್ತಮಾನದಲ್ಲಿ ಪ್ರಜೆ-ಪ್ರಜಾಪ್ರತಿನಿಧಿ-ಪ್ರಭುತ್ವಗಳಲ್ಲಿ ಸ್ವಲ್ಪ ಮಟ್ಟಿಗಿನ ಪಾಪಪ್ರಜ್ಞೆಯನ್ನು ಜಾಗೃತಗೊಳಿಸುವ ಆಶಯದಿಂದ ಈ ನಾಟಕವನ್ನು ರೂಪಿಸಲಾಗಿದೆ. ಕನ್ನಡ ಪ್ರೇಕ್ಷಕರನ್ನು ಮನರಂಜಿಸುತ್ತಲೇ ಮನೋಚಿಂತನೆಗೆ ಹಚ್ಚುವ ಪ್ರಯತ್ನ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net