ಅಪ್ಪಚ್ಚಕವಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಾರ್ಯಕ್ರಮ

20 gkp 01.
ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾ ಸಂಸ್ಥೆಯಲ್ಲಿ ಪೊನ್ನಂಪೇಟೆ ಕ್ಲಸ್ಟರ್ ಮಟ್ಟದ ಕಾರ್ಯಕ್ರಮದಲ್ಲಿ ಎಂ.ಎಸ್.ಭಾರತಿ, ಕಿರಣ್ ನಾಚಪ್ಪ, ಆರತಿ ಸತ್ಯ, ಶಕುಮಂದಣ್ಣ, ಪಾರ್ವತಿ ಜೋಯಪ್ಪ ಭಾಗವಹಿಸಿದ್ದರು.
Published on

ಗೋಣಿಕೊಪ್ಪಲು: ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾ ಸಂಸ್ಥೆಯಲ್ಲಿ ಪೊನ್ನಂಪೇಟೆ ಕ್ಲಸ್ಟರ್ ಮಟ್ಟದ ವಿವಿಧ ಕಾರ್ಯಕ್ರಮಗಳು ಬುಧವಾರ ಜರುಗಿದವು.

ಕಾರ್ಯಕ್ರಮದ ಅಂಗವಾಗಿ ಅಂತರ ಶಾಲಾ ಭಾಷಣ ಹಾಗೂ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾಕಾಮಾಡ ಎನ್. ನಾಣಯ್ಯ ಅವರ ಜ್ಞಾಪಕಾರ್ಥವಾಗಿ ಸ್ಪರ್ಧೆ ನಡೆಸಲಾಯಿತು.

ಫ್ರೌಢಶಾಲಾ ವಿಭಾಗಕ್ಕೆ ಸ್ವಾತಂತ್ರೃ ಹೋರಾಟದಲ್ಲಿ ಹೋರಾಡಿದ ಕೊಡಗಿನ ವೀರವನಿತೆಯರ ಸ್ಮರಣೆ ಎಂಬ ವಿಷಯದಲ್ಲಿ ಆಂಗ್ಲ ಹಾಗೂ ಕನ್ನಡದಲ್ಲಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕ್ಲಸ್ಟರ್ ಭಾಗದ ವಿವಿಧ 10 ಶಾಲೆಗಳಿಂದ ಸ್ಪರ್ಧಾರ್ಥಿಗಳು ಪಾಲ್ಗೊಂಡರು.

ಆಂಗ್ಲ ಭಾಷೆಯ ತೀರ್ಪುಗಾರರಾಗಿ ನಿವೃತ್ತ ಶಿಕ್ಷಕ ಕಿರಣ್ ನಾಚಪ್ಪ, ಲಯನ್ಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಆರತಿ ಸತ್ಯ, ಕನ್ನಡ ಭಾಷೆಯ ತೀರ್ಪುಗಾರರಾಗಿ ಕಾಲ್ಸ್ ಶಾಲೆಯ ಉಪನ್ಯಾಸಕಿ ಶಕುಮಂದಣ್ಣ, ನಿವೃತ್ತ ಶಿಕ್ಷಕಿ ಪಾರ್ವತಿ ಜೋಯಪ್ಪ ಪಾಲ್ಗೊಂಡಿದ್ದರು. ತಿರ್ಪುಗಾರರು ವಿಜೇತರನ್ನು ಆಯ್ಕೆ ಮಾಡಿದರು.

ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಂಗ ಚಂಗಪ್ಪನವರು ಟ್ರೋಫಿ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ.ಎಸ್.ಭಾರತಿಯರು ಕಾರ್ಯಕ್ರಮದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪೊನ್ನಿಮಾಡ ಎಸ್.ಸುರೇ, ಉಪಾಧ್ಯಕ್ಷ ಮೂಕಳೇರ ಕಾವ್ಯಾ, ಗೌರವ ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ, ಇಮ್ಮಿ ಉತ್ತಪ್ಪ, ಗುಮ್ಮಟ್ಟಿರ ಗಂಗಮ್ಮ ಕಳ್ಳಿಚಂಡ ಚಿಪ್ಪ ದೇವಯ್ಯ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಪ್ರಶಸ್ತಿ ವಿಜೇತರು: ಹಿರಿಯ ಪ್ರಾಥಮಿಕ ಕನ್ನಡ ವಿಭಾಗದಲ್ಲಿ ಸಂತ ಅಂತೋಣಿ ಪ್ರಾಥಮಿಕ ಶಾಲೆಯ ಅಕ್ಷರ ತಂಗಮ್ಮ (ಪ್ರ), ಕಿರುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೃಂದಾ (ದ್ವಿ), ಅಪ್ಪಚ್ಚ ಕವಿ ವಿದ್ಯಾಲಯದ ಅನುಶ್ರೀ (ತೃ), ಇಂಗ್ಲಿಷ್ ವಿಭಾಗದಲ್ಲಿ ಬೇಗೂರಿನ ಕೂರ್ಗ್ ಸಿಗ್ನೇಚರ್ ಶಾಲೆಯ ಆದ್ಯಾ ಪೂವಮ್ಮ (ಪ್ರ) ಹಾಗೂ ಎಂ.ಪಿ.ಯಾಶಿಕಾ (ದ್ವಿ), ಅಪ್ಪಚ್ಚ ಕವಿ ವಿದ್ಯಾಲಯದ ಪೊನ್ನಣ್ಣ (ತೃ), ಪ್ರೌಢಶಾಲಾ ಕನ್ನಡ ವಿಭಾಗದಲ್ಲಿ ಅಪ್ಪಚ್ಚ ಕವಿ ವಿದ್ಯಾಲಯದ ಎಂ.ಎಸ್.ಮೋಕ್ಷಿತ್ (ಪ್ರ), ಟಿ.ಪಿ.ನಿಶಾ(ದ್ವಿ) ಹಾಗೂ ಸಂತ ಅಂತೋಣಿ ಪ್ರೌಢಶಾಲೆಯ ಸಿಂಚನಾ ದೇಚಮ್ಮ(ತೃ), ಇಂಗ್ಲಿಷ್ ವಿಭಾಗದಲ್ಲಿ ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆಯ ಜಾಗೃತಿ (ಪ್ರ), ಅಪ್ಪಚ್ಚ ಕವಿ ವಿದ್ಯಾಲಯದ ಎಸ್.ಕೆ.ಭವ್ಯಾ, (ದ್ವಿ) ಹಾಗೂ ಸಂತ ಅಂತೋಣಿ ಪ್ರೌಢಶಾಲೆಯ ಚಾರ್ವಿ ಚೋಂದಮ್ಮ,(ತೃ) ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net