

ಕೊಲ್ಕತ್ತಾ: ಘಟನೆ ಒಂದರಲ್ಲಿ ನೈಟ್ಕಲ್ಬ್ ಮಾಲೀಕರು ಸರ್ಕಸ್ ಥೀಮ್ ಎಂಬ ಹೆಸರಿನ ಪಾರ್ಟಿಯಲ್ಲಿ , ಮನರಂಜನೆಗಾಗಿ ಕೋತಿಯನ್ನು ಕಟ್ಟಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಘಟನೆಯೂ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಕ್ಯಾಮಾಕ್ ಸ್ಟ್ರೀಟ್ನಲ್ಲಿರುವ ಟಾಯ್ ರೂಮ್ ಎಂಬ ನೈಟ್ಕ್ಲಬ್ನಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿದ ದುರಿನ ಮೇರೆಗೆ ಪೊಲೀಸರು ಕ್ಲಬ್ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ.
ಟಾಯ್ ರೂಮ್ ಎಂಬ ನೈಟ್ ಕ್ಲಬ್ ಜೂನ್ 16ರಂದು ಸರ್ಕಸ್ ಥೀಮ್ ಎಂಬ ಹೆಸರಿನಲ್ಲಿ ಅಂಧಿನ ದಿನ ಪಾರ್ಟಿ ಒಂದನ್ನು ಆಯೋಜಿಸಿದೆ. ಕ್ಲಬ್ಗೆ ಬರುವ ಗ್ರಾಹಕರಿಗೆ ಹೆಚ್ಚಿನ ಮನರಂಜನೆಯನ್ನು ಒದಗಿಸಲು ಮುಂದಾದ ಮಾಲೀಕರು ಕೋತಿ ಮರಿಗಳನ್ನು ಚೈನ್ನಲ್ಲಿ ಕಟ್ಟಿ ಹಾಕಿದ್ದಾರೆ.
ಘಟನೆಯ ವಿಡಿಯೋವನ್ನು ಬಂಗಾಳದ ಖ್ಯಾತ ನಟಿ ಸ್ವಸ್ತಿಕಾ ಮುಖರ್ಜಿ ಥೀಮ್ಡ್ ಪಾರ್ಟಿ ಹೆಸರಿನಲ್ಲಿ ಪ್ರಾಣಿಗಹಳಿಗೆ ಈ ರೀತಿ ಚಿತ್ರಹಿಂಸೆ ಕೊಡುವುದನ್ನು ನೋಡಲು ನನ್ನಿಂದ ಸಾಧ್ಯವಿಲ್ಲ. ಈ ರೀತಿಯ ಕೃತ್ಯಗಳನ್ನು ನೋಡಿಕೊಂಡ ಯಾರು ಸುಮ್ಮನೆ ಕುಳಿತುಕೊಳ್ಳುವ ಮಾತಿಲ್ಲ ಎಂದು ಟಾಯ್ ರೂಮ್ ನೈಟ್ಕ್ಲಬ್ ವಿರುದ್ಧ ಕಿಡಿಕಾರಿದ್ಧಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಟಾಯ್ ರೂಮ್ ನೈಟ್ಕ್ಲಬ್ ಮಾಲೀಕರು ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಕೆಲವ ಮದರಾಸಿಗಳು ರೆಸ್ಟೋರೆಂಟ್ನ ಒಳಗೆ ಬರಲು ಯತ್ನಿಸಿದ್ದರು ಅವರನ್ನು ತಡೆದಾಗ ಹೊರಾಂಗಣದಲ್ಲಿ ಈ ರೀತಿ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.