ಕರೊನಾ ಪ್ರಕರಣ ಹೆಚ್ಚಳ, ಶಾಲೆಗಳನ್ನು ಮುಚ್ಚುವುದೇ ಕೊನೆಯ ಆಯ್ಕೆ!; ಎಲ್ಲಿ ಈ ಚಿಂತನೆ?

Corona
Published on

ನವದೆಹಲಿ: ಮತ್ತೆ ಹಲವೆಡೆ ಕರೊನಾ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದ್ದು, ಇಲ್ಲೊಂದು ಕಡೆ ಕೋವಿಡ್ ಪರಿಸ್ಥಿತಿ ಎಷ್ಟೊಂದು ಬಿಗಡಾಯಿಸಿದೆ ಎಂದರೆ ಈಗಾಗಲೇ ಇಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳನ್ನು ಮುಚ್ಚಲು ಚಿಂತನೆ ನಡೆಸಲಾಗಿದೆ.

ಹೌದು.. ದೇಶದ ರಾಜಧಾನಿ ದೆಹಲಿಯಲ್ಲಿ ಇಂಥದ್ದೊಂದು ಚಿಂತನೆ ಹೊರಹೊಮ್ಮಿದೆ. ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಶಿಕ್ಷಣ ನಿರ್ದೇಶನಾಲಯವು ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಶಾಲೆಗಳನ್ನು ಮುಚ್ಚುವುದೇ ಕೊನೆಯ ಆಯ್ಕೆ ಆಗಬಹುದು. ಅಗತ್ಯ ಬಿದ್ದರೆ ಭಾಗಶಃವಾಗಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಹೇಳಿದ್ದಾರೆ.

ವಿದ್ಯಾಭ್ಯಾಸಕ್ಕೆ ಮತ್ತೆ ಅಡ್ಡಿ ಪಡಿಸುವಂಥ ಒಲವು ಸರ್ಕಾರಕ್ಕಿಲ್ಲ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸುರಕ್ಷೆ ಒದಗಿಸುವ ಜತೆಗೆ ವಿದ್ಯಾಭ್ಯಾಸ ನಿರಾತಂಕವಾಗಿ ನಡೆಯುವಂತೆ ಮಾಡುವುದು ಸರ್ಕಾರದ ಗುರಿ ಎಂದೂ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net