

ಶಿವಮೊಗ್ಗ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಅಧ್ಯಯನ ಕೇಂದ್ರ, ರೇಡಿಯೋ ಶಿವಮೊಗ್ಗ, ಕುವೆಂಪು ಶತಮಾನೋತ್ಸವ ಬಿ.ಇಡಿ ಕಾಲೇಜಿನೊಂದಿಗೆ ಭಗತ್ ಸಿಂಗ್ ಯುವಕರ ಸಂಘ ಹಾಗೂ ಮಲವಗೊಪ್ಪ ಗ್ರಾಮಸ್ಥರು ಒಗ್ಗೂಡಿ ವಿಶ್ವ ಪರಿಸರ ದಿನದ ಅಂಗವಾಗಿ ಮಲವಗೊಪ್ಪ ಚನ್ನಬಸವ ದೇವಸ್ಥಾನದ ಕಲ್ಯಾಣಿ ಸ್ವಚ್ಛಗೊಳಿಸಲಾಯಿತು.
ಸಹ್ಯಾದ್ರಿ ಕಾಲೇಜು ನಿವೃತ್ತ ಪ್ರಾಚಾರ್ಯ ಪ್ರೊ. ಹೂವಯ್ಯ ಗೌಡ ದೇವಸ್ಥಾನದ ಆವರಣದಲ್ಲಿ ಹೂವಿನ ಗಿಡ ನೆಟ್ಟು ಮಾತನಾಡಿ, ನಾವು ಈಗಾಗಲೇ ಭೂಮಿಯನ್ನು ಹಾಳುಮಾಡಿದ್ದೇವೆ. ಇದರ ಪರಿಣಾಮವಾಗಿ ಹಸಿರಾದ ನಾಡು ಮರುಭೂಮಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಿಡ್ಸ್ ಸಂಸ್ಥೆ ಅಧ್ಯಕ್ಷ ಎಸ್.ಚಂದ್ರಶೇಖರ್, ಬಿ.ಇಡಿ ಕಾಲೇಜು ಪ್ರಾಚಾರ್ಯ ಡಾ. ಜಿ.ಮಧು, ಪ್ರೊ. ಎ.ಎಸ್.ಚಂದ್ರಶೇಖರ್, ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗದ ನಿರ್ದೇಶಕ ಜಿ.ಎಲ್.ಜನಾರ್ದನ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿಗಳಾದ ಸುಮತಿ ಹಾಗೂ ಶಿಲ್ಪಾ ಇದ್ದರು. ಎನ್‌ಎಸ್‌ಎಸ್‌ನ 80 ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.