

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಮೇ 31ರಿಂದ ಶೈಕ್ಷಣಿಕ ವರ್ಷದ ಆರಂಭದ ಹಿನ್ನೆಲೆ ವಿಶೇಷ ಸ್ವಚ್ಛತಾ ಕಾರ್ಯ ಗುರುವಾರ ನಡೆಯಿತು.
ಶಾಲೆ ಮುಖ್ಯಶಿಕ್ಷಕ ಕೆ.ಸಿ ಸತೀಶ್ ಮಾತನಾಡಿ, ಮೇ 31ರ ಶುಕ್ರವಾರ ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತರಗತಿಗಳಿಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಕಳೆದ 4-5 ದಿನಗಳಿಂದ ಶಾಲೆ ಆವರಣ ಸೇರಿದಂತೆ ಪ್ರತಿಯೊಂದು ಕೊಠಡಿಗಳನ್ನು ಮತ್ತು ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸಿ, ಸ್ವಚ್ಛತೆ ಮಾಡುವ ಮೂಲಕ ನೈರ್ಮಲ್ಯವನ್ನು ಕಾಪಾಡಲಾಗಿದೆ. ಈ ಬಾರಿ ನಮ್ಮ ಶಾಲೆಗೆ 52 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 260ಕ್ಕೂ ವಿದ್ಯಾರ್ಥಿಗಳು ವ್ಯಾಸಂಗ ಮಾಡಲಿದ್ದಾರೆ. ಮೊದಲ ದಿನ ಮಕ್ಕಳು ಶಾಲೆಗೆ ಆಗಮಿಸುವ ವೇಳೆ ಹೂ ಹಾಗೂ ಸಿಹಿ ನೀಡಿ ಅವರನ್ನು ಸ್ವಾಗತಿಸಲಾಗುವುದು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕಾವ್ಯಾ ಜನಾರ್ಧನ್, ಉಪಾಧ್ಯಕ್ಷ ಮಹೇಶ್, ಸದಸ್ಯರಾದ ತುಂಗಶ್ರೀ, ಪ್ರಸನ್ನ, ಮುಖಂಡರಾದ ಎಚ್.ಟಿ ಗೋವಿಂದೇಗೌಡ, ನಾರಾಯಣ, ಕುಮಾರ್, ಜಯರಾಮೇಗೌಡ, ಶಿಕ್ಷಕರಾದ ಎಂ.ವಿದ್ಯಾಶ್ರೀ, ಶಾಜೀಯ ಪರ್ವೀನ್, ಚಂದ್ರಶೇಖರ್, ಜಾಬೀನ ಬೀಬಿ, ನಾಗರತ್ನ, ಅಡುಗೆ ಸಿಬ್ಬಂದಿ ಸುಚಿತ್ರ, ಮಂಜುಳಾ, ಸವಿತಾ, ಪ್ರೇಮಮ್ಮ ಮತ್ತಿತರರಿದ್ದರು.