

ಶಿವಮೊಗ್ಗ: ಜಿಲ್ಲಾಡಳಿತ, ನಂಜಪ್ಪ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಮತ್ತಿತರ ಸಂಘ ಸಂಸ್ಥೆಗಳು, ಕಾಲೇಜುಗಳ ಸಹಯೋಗದಲ್ಲಿ ಮಂಗಳವಾರ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆ ನೀಡಿದರು.
ನಗರಪಾಲಿಕೆ, ಜಿಪಂ, ನೆಹರು ಯುವ ಕೇಂದ್ರ, ಶಿವಮೊಗ್ಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜು, ಗೋಪಾಳದ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್, ಮಲೆನಾಡು ಕಲಾ ತಂಡ, ವಿವೇಕಾನಂದ ಯೂತ್ ಫೌಂಡೇಷನ್ ಅಭಿಯಾನದ ಸಹಭಾಗಿತ್ವ ಹೊಂದಿದ್ದರು.
ಸುಮಾರು 250 ವಿದ್ಯಾರ್ಥಿಗಳು ಆಲ್ಕೊಳ ವೃತ್ತದಿಂದ ನಂಜಪ್ಪ ಲೈಫ್‌ಕೇರ್‌ವರೆಗೆ ಎರಡು ತಂಡಗಳಲ್ಲಿ ಅಭಿಯಾನ ನಡೆಸಲಾಯಿತು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಕೆಟಿಕೆ ಉಲ್ಲಾಸ್ ಮಾತನಾಡಿದರು. ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಕ್ಯಾ ನಾಯ್ಕ, ಪಶುವೈದ್ಯಕೀಯ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ರವಿಕುಮಾರ್, ಯೋಗೇಶ್, ನಂಜಪ್ಪ ಫಿಸಿಯೋಥೆರಪಿ ಇನ್‌ಸ್ಟಿಟ್ಯೂಟ್ ಪ್ರಾಚಾರ್ಯ ರಾಜನ್, ಕಟೀಲು ಅಶೋಕ್ ಪೈ ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ ಇತರರಿದ್ದರು.