ಶುಚಿತ್ವ, ಬೀದಿದೀಪದ ವ್ಯವಸ್ಥೆ ಕಲ್ಪಿಸಲಿ

VARUR MEETING
Published on

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗುವ ಕೆಂಪು ಗಣಪನ ದರ್ಶನಕ್ಕೆ ಬರುವವರಿಗೆ ಸ್ಥಳೀಯ ಯುವಕರು ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ ಹೇಳಿದರು.

ಗಣೇಶೋತ್ಸವ ನಿಮಿತ್ತ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, . ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ನಿರ್ವಹಿಸಬೇಕು. ಗ್ರಾಪಂನವರು ಲಭ್ಯವಿರುವ ಅನುದಾನದಡಿ ರಸ್ತೆ ಸ್ವಚ್ಛತೆ ಮತ್ತು ಬೀದಿದೀಪದ ವ್ಯವಸ್ಥೆ ಮಾಡಬೇಕು. ಭಕ್ತರ ದಟ್ಟಣೆ ತಡೆಗಟ್ಟಲು ಗ್ರಾಮದ ರಸ್ತೆಯ ಒಂದೇ ಬದಿಯಲ್ಲಿ ವಿವಿಧ ಅಂಗಡಿ ಹಾಗೂ ಮಳಿಗೆಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದರು.

ಪಿಡಿಒ ಸಿ.ಬಿ. ಪೂಜಾರ ಮಾತನಾಡಿ, ಗ್ರಾಮದಲ್ಲಿ ಸ್ವಚ್ಛತೆ, ರ್ಪಾಂಗ್, ಬೀದಿದೀಪ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರ ಅವಶ್ಯ ಕೆಲಸಗಳನ್ನು ನಿರ್ವಹಿಸಲಾಗುವುದು ಎಂದರು.

ಸಿಪಿಐ ಮುರುಗೇಶ ಚೆನ್ನಣ್ಣವರ ಮಾತನಾಡಿ, ಉತ್ಸವದ ಭದ್ರತೆಗೆ ಹೊಸ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಶಾಂತಿಯುತ ಹಬ್ಬದಾಚರಣೆಗೆ ಗ್ರಾಮಸ್ಥರು ಸಹಕರಿಸಬೇಕು. ಸಾರ್ವಜನಿಕ ಗಣೇಶ ಸಮಿತಿಯವರು ಗ್ರಾಪಂ, ಪೊಲೀಸ್ ಹಾಗೂ ಕೆಇಬಿಯಿಂದ ಪರವಾನಗಿ ಪಡೆದು ಗಣೇಶನನ್ನು ಪ್ರತಿಷ್ಠಾಪಿಸಬೇಕು ಎಂದು ಸೂಚಿಸಿದರು.

ಡಿವೈಎಸ್ಪಿ ವಿನೋದ ಮುಕ್ತಿದಾರ ಮಾತನಾಡಿ, ಗಣೇಶೋತ್ಸವದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಗಣೇಶ ಪ್ರತಿಷ್ಠಾಪನ ಮನೆತನದ ವಿನಾಯಕ ಕುಲಕರ್ಣಿ ಮಾತನಾಡಿ, ಭಕ್ತರಿಗೆ ಶೀಘ್ರ ದರ್ಶನ ಲಭಿಸುವಂತೆ ಪೊಲೀಸರು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಕೆಎಸ್​ಆರ್​ಟಿಸಿ, ಹೆಸ್ಕಾಂ, ಅಗ್ನಿಶಾಮಕ ದಳ, ಆರೋಗ್ಯ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಅಧಿಕಾರಿಗಳು ಮಾತನಾಡಿದರು. ಗ್ರಾಪಂ ಅಧ್ಯಕ್ಷ ರವಿ ಹುಲ್ಲಂಬಿ, ಉಪಾಧ್ಯಕ್ಷ ರಸೂಲಬಿ ಹುಬ್ಬಳ್ಳಿ, ಸದಸ್ಯರಾದ ರವಿ ಕಾಗೇನವರ, ಗದಿಗೆಪ್ಪ ಭಂಡಿವಾಡ, ಭಗವಂತ ಬಸಾಪೂರ, ರುದ್ರಪ್ಪ ಅಗಡಿ, ಹಮೀದ್ ಮುಲ್ಲಾ, ಪುಷ್ಪಲತಾ ಕಾಳೆ, ಝುರಿನಾಬಿ ದುಂಡಶಿ, ಗೌರವ್ವ ಕುರುಬರ, ಲಲಿತಾ ಕಲ್ಲಣ್ಣವರ, ರತ್ನವ್ವ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net