Pre Nursery ವಿದ್ಯಾರ್ಥಿನಿ ಮೇಲೆ 9 ವರ್ಷದವನಿಂದ ಲೈಂಗಿಕ ದೌರ್ಜನ್ಯ

Harassment
Published on

ಪುಣೆ: ಸಾಮಾಜಿಕ ಜಾಲತಾಣಗಳಿಂದ ಪ್ರಭಾವಿತನಾಗಿ ಮೂರನೇ ತರಗತಿ ವಿದ್ಯಾರ್ಥಿಯೋರ್ವ ಮೂರು ವರ್ಷದ ಬಾಲಕಿ (Pre Nursery Student) ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಪುಣೆಯ ಕೊಂಡ್ವಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಬಾಲಕನನ್ನು ಬಂಧಿಸಿ ಜುವೆನೈಲ್ ಜಸ್ಟೀಸ್ ಬೋರ್ಡ್ಎದುರು ಹಾಜರುಪಡಿಸಿದ್ದು, ಕೋರ್ಟ್​ ಆತನಿಗೆ ಜಾಮೀನು ಮಂಜೂರು ಮಾಡಿದ್ದು, ಬಾಲಕನನ್ನು ಪೋಷಕರಿಗೆ ಒಪ್ಪಿಸುವಂತೆ ಸೂಚಿಸಿದೆ. 

ಈ ಕುರಿತು ಮಾತನಾಡಿರುವ ಕೊಂಡ್ವಾ ಠಾಣೆಯ ಎಸ್​ಐ ಸ್ನೇಹಲ್​ ಜಾಧವ್​, ಸಂತ್ರಸ್ತೆ ಬಾಲಕಿಯು ಪ್ರಿನರ್ಸರಿ (Pre Nursery) ವಿದ್ಯಾರ್ಥಿನಿಯಾಗಿದ್ದು, ಬಾಲಕ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇಬ್ಬರು ನೆರೆಹೊರೆಯಲ್ಲಿ ವಾಸಿಸುತ್ತಿದ್ದು, ಮಗು ಆರೋಪಿ ಬಾಲಕನನ್ನು ಅಣ್ಣ ಎಂದು ಕರೆಯುತ್ತಿತ್ತು.

ಬಾಲಕಿ ಒಬ್ಬಳೇ ಇದ್ದುದ್ದನ್ನು ಗಮನಿಸಿದ ಆರೋಪಿಯು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ವಿಚಾರವನ್ನು ಬಾಲಕಿ ಆಕೆಯ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಕೂಡಲೇ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ಸಾಮಾಜಿಕ ಜಾಲತಾಣದ ಪ್ರಭಾವಕ್ಕೆ ಒಳಗಾಗಿ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಾಲಕನ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಲಾಗಿದೆ ಎಂದು ಕೊಂಡ್ವಾ ಠಾಣೆಯ ಎಸ್​ಐ ಸ್ನೇಹಲ್​ ಜಾಧವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net