ನಟಿ ಸಂಜನಾ ಮುಸ್ಲಿಂ, ನೂರಕ್ಕೆ ನೂರು ಸತ್ಯ.. ಮೌಲಾನಾ ಜೈನುಲಬ್ದೀನ್ ಸ್ಪಷ್ಟನೆ

Sanjana
Published on

ಬೆಂಗಳೂರು: 'ನಟಿ ಸಂಜನಾ ಗಲ್ರಾನಿ ಮುಸ್ಲಿಂ ಎನ್ನುವುದು ನೂರಕ್ಕೆ ನೂರು ಸತ್ಯ..' - ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರೇ ಈ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೂರಕ್ಕೆ ನೂರು ಸತ್ಯ. ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನಮ್ಮ ಮದರಸಾದಲ್ಲೇ ಎಂದು ಬೆಂಗಳೂರಿನ ಟ್ಯಾನರಿ ರೋಡ್​ನ ದಾರುಲ್ ಉಲೂಮ್ ಶಾಹ್ ವಲಿಯುಲ್ಲಾ ಮದರಸಾದ ಮೌಲಾನಾ ಜೈನುಲಬ್ದೀನ್ ಖಚಿತ ಪಡಿಸಿದ್ದಾರೆ.

ಇಸ್ಲಾಂ ಧರ್ಮವನ್ನು ಇಷ್ಟಪಟ್ಟು ಸ್ವೀಕರಿಸುತ್ತಿದ್ದೇನೆ ಅಂತ ಸಂಜನಾ ಹೇಳಿದ್ದರು. ಅವರು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಮತ್ತೆ ಹೊಸ ಜೀವನ ಪ್ರಾರಂಭಿಸಿದರೆ, ಅವರನ್ನು ಅಲ್ಲಾಹು ಕ್ಷಮಿಸುತ್ತಾರೆ. ಇಸ್ಲಾಂನಲ್ಲಿ ದಂಧೆ ಮಾಡುವುದು ತಪ್ಪು. ಸಂಜನಾ ಅದನ್ನು ಬಿಟ್ಟು ಬಂದರೆ ನಾವು ಅವರನ್ನು ಮುಸ್ಲಿಂ ಎಂದೇ ಸ್ವೀಕರಿಸುತ್ತೇವೆ ಎಂದಿರುವ ಮೌಲಾನಾ ಜೈನುಲಬ್ದೀನ್​, ಆಕೆಯನ್ನು ನೋಡಲು ತಾವು ಜೈಲ್​ಗೆ ಹೋಗುವುದಿಲ್ಲ, ತಾವು ಹಾಗೆ ಹೋಗುವ ಹಾಗೂ ಇಲ್ಲ ಎಂಬುದಾಗಿ ಹೇಳಿದ್ದಾರೆ.

ಹಿಂದಿ ನಟ ದಿಲೀಪ್ ಕುಮಾರ್​ ಅವರ ಮೂಲ ಹೆಸರು ಮಹಮ್ಮದ್ ಯೂಸುಫ್. ಆದರೆ ಅವರು ದಿಲೀಪ್ ಕುಮಾರ್ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದರು. ಹಾಗಾಗಿ ಸಂಜನಾ ಮಹೀರಾ ಎಂದು ಹೇಳಿಕೊಳ್ಳದೆ ಇರುವುದು ಅಂಥ ಸಮಸ್ಯೆ ಏನಲ್ಲ ಎಂದು ಮೌಲಾನಾ ಜೈನುಲಬ್ದೀನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net