

ಗೋಣಿಕೊಪ್ಪ: ರಾಜ್ಯ ಸಹಕಾರಿ ಮಹಾಮಂಡಳ ಬೆಂಗಳೂರು, ಕೊಡಗು ಸಹಕಾರಿ ಯೂನಿಯನ್ ನಿಯಮಿತ ಮಡಿಕೇರಿ ಸಹಕಾರಿ ಸಹಯೋಗದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಶನಿವಾರ ಮಡಿಕೇರಿಯ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪೊನ್ನಂಪೇಟೆ ಸಹಕಾರ ಬ್ಯಾಂಕಿನ ಅಧ್ಯಕ್ಷ ಸಿ.ಕೆ.ಉತ್ತಪ್ಪ ಅವರಿಗೆ ಸಹಕಾರಿ ಕ್ಷೇತ್ರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅರಕಲಗೂಡು ಶಾಸಕ ಎ.ಮಂಜು ಅವರು ಹಿರಿಯ ಸಹಕಾರಿಗಳಿಗೆ ಸಹಕಾರಿ ಕ್ಷೇತ್ರ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 53 ವರ್ಷಗಳು ನಿರಂತರವಾಗಿ ನಿರ್ದೇಶಕರಾಗಿ, 9 ಬಾರಿ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಿ.ಕೆ ಉತ್ತಪ್ಪ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ ಅಧ್ಯಕ್ಷತೆ ವಹಿಸಿದ್ದರು.