ಆರ್​ಎಸ್​ಎಸ್​​ನ ವಿಜಯದಶಮಿ ಕಾರ್ಯಕ್ರಮಕ್ಕೆ ಆಹ್ವಾನ: ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದ ಸಿಜೆಐ ಬಿ.ಆರ್.ಗವಾಯಿ ತಾಯಿ| B R Gavai Mother

Untitled design - 2025-10-02T073727.447
Published on

B R Gavai Mother: ವಿಜಯದಶಮಿ ಸಂದರ್ಭದಲ್ಲಿ ಆಯೋಜಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್.ಗವಾಯಿ ತಾಯಿ ಡಾ.ಕಮಲತಾಯಿ ಗವಾಯಿ ಸ್ಪಷ್ಟಪಡಿಸಿದ್ದಾರೆ ಎಂದು (ಅ. 02) ವರದಿಯಾಗಿದೆ.

ಅ. 5ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆಯಲಿರುವ ಆರ್​ಎಸ್​ಎಸ್​ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿವಾದ ಭುಗಿಲೆದ್ದ ಬಳಿಕ ಹಾಜರಾಗದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ತಮ್ಮ ಕುಟುಂಬವು ಅಂಬೇಡ್ಕರ್ ಅವರ ಸಿದ್ಧಾಂತವನ್ನು ಅನುಸರಿಸುತ್ತದೆ. ತಮ್ಮ ಪತಿ ದಾದಾಸಾಹೇಬ್ ಅವರು ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ಹರಡಲು ಇತರ ಸಂಸ್ಥೆಗಳು ಆಯೋಜಿಸಿದ್ದ ಸಭೆಗಳಿಗೆ ಹಾಜರಾಗುತ್ತಿದ್ದರು. ಈ ತಿಂಗಳ 5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ಅದೇ ವೇದಿಕೆಯಿಂದ ಅಂಬೇಡ್ಕರ್ ಅವರ ಅಭಿಪ್ರಾಯಗಳನ್ನು ಹರಡಲು ಅವಕಾಶ ಸಿಗುತ್ತಿತ್ತು ಎಂದು ಹೇಳಿದ್ದಾರೆ.

ಪ್ರಸ್ತುತ ಕಮಲತಾಯಿ ಗವಾಯಿಯವರು ಆರೋಗ್ಯ ಕಾರಣಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಸೆ. 28ರಂದು ಕಮಲತಾಯಿ ಬರೆದಿದ್ದಾರೆ ಎನ್ನಲಾದ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ಪತ್ರದಲ್ಲಿ ಅವರು ಆರ್‌ಎಸ್‌ಎಸ್ ಸಭೆಯಲ್ಲಿ ಅವರು ಭಾಗವಹಿಸುತ್ತಿದ್ದಾರೆಂದು ಎಂದು ತಿಳಿಸಲಾಗಿತ್ತು.

ಆದರೆ, ಇದು ನಕಲಿ ಪತ್ರ ಮತ್ತು ಅದನ್ನು ನಮ್ಮ ತಾಯಿ ಬರೆದಿಲ್ಲ ಎಂದು ಅವರ ಕಿರಿಯ ಮಗ ರಾಜೇಂದ್ರ ಗವಾಯಿ ಸ್ಪಷ್ಟಪಡಿಸಿದ್ದಾರೆ. ದಾದಾಸಾಹೇಬ್ ಗವಾಯಿ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷೆ ಮತ್ತು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ಅವರ ತಾಯಿಗೆ ಆರ್‌ಎಸ್‌ಎಸ್ ನಾಯಕರಿಂದ ಆಹ್ವಾನ ಬಂದಿತ್ತು. ಆದರೆ ಅವರು ಭಾಗವಹಿಸುತ್ತಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net