ದೀರ್ಘಕಾಲ ಕುಳಿತುಕೊಳ್ಳುವುದು ಧೂಮಪಾನದಂತೆಯೇ ನಮ್ಮ ದೇಹಕ್ಕೆ ಹಾನಿಕಾರಕವಂತೆ; ಇದರಿಂದ ಪಾರಾಗಲು ಇಲ್ಲಿದೆ ಸಲಹೆ| lifestyle

work sitting
Published on

lifestyle ; ನಾವೆಲ್ಲರೂ ನಿತ್ಯ ಕೆಲಸದಲ್ಲಾಗಲಿ ಅಥವಾ ಮನೆಯಲ್ಲಿ ಮೊಬೈಲ್ ಫೋನ್, ಲ್ಯಾಪ್‌ಟಾಪ್‌ಗಳನ್ನು ಬಳಸುವುವುದಕ್ಕಾಗಲೀ ಗಂಟೆಗಟ್ಟಲೆ ಕುರ್ಚಿಗಳಲ್ಲಿ ಕುಳಿತುಕೊಳ್ಳುತ್ತೇವೆ. ದೀರ್ಘಕಾಲ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇದನ್ನು ಸಿಟ್ಟಿಂಗ್ ಡಿಸೀಸ್ ಎಂದೂ ಸಹ ಕರೆಯುತ್ತಾರೆ. ಈ ನಿರಂತರ ಕುಳಿತುಕೊಳ್ಳುವಿಕೆಯು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತಿದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ಹೆಚ್ಚಾಗಿ ಕುಳಿತುಕೊಳ್ಳುವುದನ್ನು ಧೂಮಪಾನದಂತೆಯೇ ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ ಎಂದು ಕರೆದಿದ್ದಾರೆ. ಇದು ಹೃದಯರಕ್ತನಾಳದ ಕಾಯಿಲೆಗಳು, ಒಬೆಸಿಟಿ, ಟೈಪ್ 2 ಡಯಾಬಿಟೀಸ್, ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆಯಂತೆ ಹಾಗಾಗಿ ಈ ಸಮಸ್ಯೆಯಿಂದ ಪಾರಾಗಲು ಏನು ಮಾಡಬೇಕೆಂದು ತಿಳಿಯೋಣ.

ಅಯೋವಾ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಈ ಅಧ್ಯಯನವು ತಮ್ಮ ದೈಹಿಕ ಚಟುವಟಿಕೆಯ ಮಟ್ಟವನ್ನು ವರದಿ ಮಾಡಿದ 7,000 ಕ್ಕೂ ಹೆಚ್ಚು ರೋಗಿಗಳ ಡೇಟಾವನ್ನು ಆಧರಿಸಿದೆ. ದೀರ್ಘಕಾಲ ಕುಳಿತೇ ಇರುವವರಲ್ಲಿ ಧೂಮಪಾನದಂತೆಯೇ ಪರಿಣಾಮಗಳು ಕಂಡುಬಂದಿವೆ. ನಿರಂತರವಾಗಿ ಕುಳಿತುಕೊಳ್ಳುವುದರಿಂದ ಸರಿಯಾದ ರಕ್ತ ಪರಿಚಲನೆಗೆ ಅವಕಾಶ ಸಿಗುವುದಿಲ್ಲ, ಇದರಿಂದಾಗಿ ಕಾಲುಗಳು ಮತ್ತು ಸೊಂಟದಲ್ಲಿ ನೋವು ಹೆಚ್ಚಾಗುತ್ತವೆ. ಆದರೆ ಅದೇ ಜೀವನಶೈಲಿಯೊಂದಿಗೆ ಸಕ್ರಿಯರಾಗಿದ್ದ ಮತ್ತು ವ್ಯಾಯಾಮ ಮಾಡಿದ ಜನರಲ್ಲಿ ಈ ರೋಗಗಳ ಅಪಾಯ ಕಡಿಮೆ ಇರುತ್ತದೆ.

ಹಾನಿಯನ್ನು ತಪ್ಪಿಸುವುದು ಹೇಗೆ?

ನಿಯಮಿತ ಚಲನೆ: ಪ್ರತಿ 30-60 ನಿಮಿಷಗಳಿಗೊಮ್ಮೆ ಎದ್ದು 2-5 ನಿಮಿಷಗಳ ಕಾಲ ವಾಕಿಂಗ್, ಸ್ಟ್ರೆಚಿಂಗ್ ಅಥವಾ ಲಘು ವ್ಯಾಯಾಮ ಮಾಡಿ. ಇದು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ.

ಸ್ಟ್ಯಾಂಡಿಂಗ್ ಡೆಸ್ಕ್ ಬಳಕೆ: ಸಾಧ್ಯವಾದರೆ ಕೆಲಸದ ಸಮಯದಲ್ಲಿ ಸ್ಟ್ಯಾಂಡಿಂಗ್ ಡೆಸ್ಕ್ ಬಳಸಿ ಅಥವಾ ಕುಳಿತು ಮತ್ತು ನಿಂತು ಕೆಲಸ ಮಾಡುವುದನ್ನು ಬದಲಾಯಿಸಿ.

ವ್ಯಾಯಾಮದ ಅಭ್ಯಾಸ: ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್, ಯೋಗ, ಅಥವಾ ಇತರ ವ್ಯಾಯಾಮಗಳನ್ನು ಮಾಡಿ. ಇದು ದೇಹದ ಚಯಾಪಚಯವನ್ನು ಸಕ್ರಿಯವಾಗಿಡುತ್ತದೆ.

ಸರಿಯಾದ ಭಂಗಿ: ಕುಳಿತಾಗ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳಿ. ಇದು ಬೆನ್ನು ಮತ್ತು ಕುತ್ತಿಗೆ ನೋವನ್ನು ಕಡಿಮೆ ಮಾಡುತ್ತದೆ.

ಸಕ್ರಿಯ ಜೀವನಶೈಲಿ: ಲಿಫ್ಟ್ ಬದಲು ಮೆಟ್ಟಿಲು ಬಳಸಿ, ಕೆಲಸಕ್ಕೆ ಸೈಕಲ್‌ನಲ್ಲಿ ಅಥವಾ ನಡೆದುಕೊಂಡು ಹೋಗಿ, ಮತ್ತು ದಿನವಿಡೀ ಚಲನೆಯನ್ನು ಉತ್ತೇಜಿಸುವ ಚಟುವಟಿಕೆಗಳನ್ನು ಆಯ್ಕೆ ಮಾಡಿ.

ಹೈಡ್ರೇಷನ್ ಮತ್ತು ಆರೋಗ್ಯಕರ ಆಹಾರ: ಸಾಕಷ್ಟು ನೀರು ಕುಡಿಯಿರಿ ಮತ್ತು ಸಮತೋಲನ ಆಹಾರವನ್ನು ಸೇವಿಸಿ. ಇದು ದೇಹದ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ಹವ್ಯಾಸಗಳು: ತೋಟಗಾರಿಕೆ, ಡ್ಯಾನ್ಸ್, ಅಥವಾ ಇತರ ಚಲನೆಯನ್ನು ಒಳಗೊಂಡಿರುವ ಹವ್ಯಾಸಗಳನ್ನು ಅಳವಡಿಸಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net