

ಶಿವಮೊಗ್ಗ: ಕೆಲಸ ಮುಗಿಸಿಕೊಂಡು ಮನೆಗೆ ಬಂದ ಸಾಗರ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ಗೆ ಹೃದಯಾಘಾತವಾಗಿದೆ.
ಶನಿವಾರ ತಡರಾತ್ರಿ ಬ್ಯಾಕೋಡು ಗ್ರಾಮದಲ್ಲಿ ಜೋಡಿ ಕೊಲೆ ನಡೆದಿತ್ತು. ಈ ಪ್ರಕರಣ ಸಂಬಂಧ ಪರಿಶೀಲನೆಗೆ ತೆರಳಿದ್ದ ಸುನೀಲ್ ಕುಮಾರ್, ಶವಗಳನ್ನು ಶವಾಗಾರಕ್ಕೆ ಸಾಗಿಸಿ ಭಾನುವಾರ ಬೆಳಗ್ಗೆ 6 ಗಂಟೆಗೆ ಮನೆಗೆ ಬಂದಿದ್ದರು.
ಜೋಡಿ ಕೊಲೆಯಲ್ಲಿ ಸತ್ತವರ ಶವಗಳನ್ನು ಶವಾಗಾರಕ್ಕೆ ಸಾಗಿಸಿ ಮನೆಗೆ ಬಂದ ಸಿಪಿಐ ಸುನೀಲ್ ಕುಮಾರ್ಗೆ ಕೆಲ ಹೊತ್ತಿನಲ್ಲೇ ಹೃದಯಾಘಾತ ಸಂಭವಿಸಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ. ಸದ್ಯ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಎಸ್ಪಿ ಶಾಂತರಾಜು, ಸುನೀಲ್ ಕುಮಾರ್ರ ಆರೋಗ್ಯ ವಿಚಾರಿಸಿದರು.