

ಬೆಂಗಳೂರು: ಈ ಹಿಂದೆ ನಗರದ ಶಾಲಾ ಮಕ್ಕಳ ಬ್ಯಾಗ್ನಲ್ಲಿ ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರ ಪತ್ತೆಯಾಗಿದ್ದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.
18 ವರ್ಷ ವಯಸ್ಸಿನ ಒಳಗೆ ಅಪ್ರಾಪ್ತರಿಗೆ ಕಾಂಡೋಮ್ ಹಾಗೂ ಗರ್ಭ ನಿರೋಧ ಮಾತ್ರ ಮಾರಾಟ ಮಾಡದಂತೆ ಹೊಸ ನಿಯಮವನ್ನು ತರಲು ಸರ್ಕಾರ ಮುಂದಾಗಿದೆ. ಔಷಧ ನಿಯಂತ್ರಣ ಇಲಾಖೆಯು ಈ ಸಂಬಂಧ ಎಲ್ಲ ಮೆಡಿಕಲ್ ಶಾಪ್ ಮಾಲೀಕರಿಗೆ ಖಡಕ್ ಸೂಚನೆ ನೀಡಿದೆ. ಶಾಲಾ ಮಕ್ಕಳು ಸೇರಿದಂತೆ 18 ವರ್ಷ ಒಳಗಿನ ಯಾವುದೇ ಮಕ್ಕಳಿಗೆ ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರೆ ಸೇರಿದಂತೆ ಯಾವುದೇ ಉತ್ತೇಜಕ ಮಾತ್ರೆಗಳನ್ನು ಕೊಡುವಂತಿಲ್ಲ ಅಥವಾ ಮಾರಾಟ ಮಾಡುವಂತಿಲ್ಲ.
ಈ ಬಗ್ಗೆ ರಾಜ್ಯ ಔಷಧ ನಿಯಂತ್ರಕರಾದ ಬಿ.ಟಿ. ಖಾನಾಪುರೆ ಮಾತನಾಡಿ, ಜನಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಕಾಂಡೋಮ್ ಎಲ್ಲೆಡೆ ಸಿಗುವಂತೆ ಮಾಡಿದ್ದೇವೆ. ಆದರೆ, ಶಾಲಾ ಮಕ್ಕಳ ಕೈಗೆ ಅದು ಸಿಕ್ಕಿರುವುದರಿಂದ ನಾವು ಒಂದು ಸುತ್ತೋಲೆಯನ್ನು ಹೊರಡಿಸಿದ್ದೇವೆ. ಚಿಕ್ಕ ಮಕ್ಕಳು ಯಾರಾದರೂ ಬಂದು ಕೇಳಿದರೆ, ಮೆಡಿಕಲ್ ಶಾಪ್ಗಳಲ್ಲಿ ಕಾಂಡೋಮ್ ಹಾಗೂ ಮತ್ತು ಬರುಷ ಔಷಧಿಗಳನ್ನು ಕೊಡಬೇಡಿ ಎಂದು ಸೂಚಿಸಿದ್ದೇವೆ ಎಂದರು.
ಘಟನೆ ಹಿನ್ನೆಲೆ ಏನು?
ತರಗತಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ತರುತ್ತಾರೆ, ಅದರಿಂದ ಕಿರಿಕಿರಿ ಆಗುತ್ತಿದೆ ಎಂದು ಬೆಂಗಳೂರಿನ ಶಿಕ್ಷಕರು ಇತ್ತೀಚೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು. ಹಾಗೆ ವಿದ್ಯಾರ್ಥಿಗಳ ಬ್ಯಾಗ್ಗಳನ್ನು ಚೆಕ್ ಮಾಡಿದ ಶಿಕ್ಷಕರಿಗೆ ಆಘಾತ ಕಾದಿತ್ತು.
ಪ್ರೌಢಶಾಲೆಗಳ 8, 9 ಮತ್ತು 10ನೇ ತರಗತಿಯ ಕೆಲ ವಿದ್ಯಾರ್ಥಿಗಳ ಬ್ಯಾಗ್ಗಳಲ್ಲಿ ಕಾಂಡೋಮ್ಗಳು, ಗರ್ಭ ನಿರೋಧಕ ಮಾತ್ರೆಗಳು, ಲೈಟರ್, ಸಿಗರೇಟ್ಗಳು, ವೈಟ್ನರ್ಗಳು ಮುಂತಾದ ವಸ್ತುಗಳು ಸಿಕ್ಕಿದ್ದವು. ಒಂದು ಶಾಲೆಯ ವಿದ್ಯಾರ್ಥಿಯ ಬ್ಯಾಗ್ನಲ್ಲಿ ಗರ್ಭ ನಿರೋಧಕ ಮಾತ್ರೆ (ಐ-ಪಿಲ್) ಕಂಡುಬಂದಿತ್ತು. ನೀರಿನ ಬಾಟಲಿಗಳಲ್ಲಿ ಆಲ್ಕೋಹಾಲ್ ಇರುವುದೂ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 18 ವರ್ಷ ಒಳಗಿನ ಮಕ್ಕಳಿಗೆ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಮಾರಾಟ ಮಾಡದಂತೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. (ದಿಗ್ವಿಜಯ ನ್ಯೂಸ್)