

ಹಾವೇರಿ: ಗ್ರಾಮಸ್ಥರ ಬೇಡಿಕೆ ಹಿನ್ನಲೆಯಲ್ಲಿ ರಾಣೆಬೆನ್ನೂರ ಘಟಕದ ಅನುಸೂಚಿ ಸಂಖ್ಯೆ 131/132ರಲ್ಲಿ ಗುತ್ತಲದಿಂದ ರಾಣೇಬೆನ್ನೂರಿಗೆ ಬೆಳಗ್ಗೆ 8 ಗಂಟೆಗೆ ವಾಯಾ ಚೌಡಯ್ಯದಾನಪುರ ಮಾರ್ಗವಾಗಿ ಆ. 25ರಿಂದ ಒಂದು ಹೆಚ್ಚುವರಿ ಸರತಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.