ಅಧ್ಯಕ್ಷರಾಗಿ ಚೊಟ್ಟಂಡ ಪ್ರಭು ಸೋಮಯ್ಯ ಆಯ್ಕೆ

Oplus_16908288
ಕೊಡವ ಕೂಟಾಳಿಯಡ ಕೂಟ ಸಂಘಟನೆಗೆ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ.
Published on

ವಿರಾಜಪೇಟೆ: ಕೊಡವ ಕೂಟಾಳಿಯಡ ಕೂಟ ಸಂಘಟನೆಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಮಂಡಳಿಯ ಆಯ್ಕೆ ಗುರುವಾರ ಪೊನ್ನಂಪೇಟೆಯ ಗೋಲ್ಡನ್ ಗೇಟ್ ಸಭಾಂಗಣದಲ್ಲಿ ಸಂಘಟನೆಯ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘಟನೆಯ ನೂತನ ಅಧ್ಯಕ್ಷರಾಗಿ ಚೊಟ್ಟಂಡ ಪ್ರಭು ಸೋಮಯ್ಯ, ಉಪಾಧ್ಯಕ್ಷರಾಗಿ ಚೆಕ್ಕೆರ ರಾಜೇಶ್, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಖಜಾಂಚಿಯಾಗಿ ಮಾಚಿಮಡ ಡಿಂಪಲ್ ಅವರು ಆಯ್ಕೆಗೊಂಡರು.

ಸಂಘಟನೆಯ ನಿರ್ದೇಶಕರಾಗಿ ಕಾಂಗಿರ ಸಂತೋಷ್ ದೇವಯ್ಯ, ಅಮ್ಮಾಟಂಡ ಚೇತನ್, ಚೇಂದಿರ ಪ್ರಿಯಾ ಲೋಹಿತ್, ನೂರೆರ ಸರಿತ ಉತ್ತಯ್ಯ, ಕೊಟ್ಟಂಗಡ ಕವಿತ ವಾಸುದೇವ, ಅಜ್ಜಮಾಡ ಸಾವಿತ್ರಿ, ಬೊಜ್ಜಂಗಡ ಭವ್ಯಾ ದೇವಯ್ಯ, ಇಟ್ಟಿರ ಭವ್ಯಾ ಈಶ್ವರ್, ಪಾಂಡಿರ ದಿವ್ಯಾ ಉತ್ತಪ್ಪ, ಚಕ್ಕೆರ ಹೇಮಾ ಅವರು ಆಯ್ಕೆಗೊಂಡರು.

ಕಾರ್ಯಕ್ರಮದಲ್ಲ ಮಾತನಾಡಿದ ನೂತನ ಅಧ್ಯಕ್ಷ ಚೊಟ್ಟಂಡ ಪ್ರಭು ಸೋಮಯ್ಯ, ಕಳೆದ ಐದು ವರ್ಷಗಳಿಂದ ಈ ಸಂಘಟನೆಯು ಹಲವಾರು ಕೊಡವ ಜನಾಂಗದವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಂದೆಯೂ ಸಂಘಟನೆಯಲ್ಲಿ ಎಲ್ಲರ ಸಲಹೆ ಸಹಕಾರದ ವಿನೂತನ ಕಾರ್ಯಕ್ರಮಗಳು ನಡೆಸುವುದಾಗಿ ತಿಳಿಸಿದರು.

ಕಾರ್ಯದರ್ಶಿ ಕಬ್ಬಚ್ಚಿರ ಕಾರ್ಯಪ್ಪ ಅವರು ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಬೊಜ್ಜಂಗಡ ಭವ್ಯಾ ಲೆಕ್ಕಪತ್ರ ಮಂಡಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷೆ ಚಿಮ್ಮಚ್ಚಿರ ಪವಿತ ರಜನ್, ಗೌರವಾದ್ಯಕ್ಷ ಚಂಗುಲಂಡ ಸೂರಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net