ಮಾರ್ಗಗಳ ಆಯ್ಕೆ

ವಿಜಯವಾಣಿ
Published on

ವಿಧಿಯ ಮೇಲೆ ವಿಶ್ವಾಸವಿರಿಸುವುದೆಂದರೆ ಈ ಜಗತ್ತಿನಲ್ಲಿ ನಡೆಯುವು ದೆಲ್ಲವೂ ದೇವರ (ಅಲ್ಲಾಹನ) ಕಡೆಯಿಂದ ನಡೆಯುತ್ತದೆ ಹಾಗೂ ಅಲ್ಲಾಹನ ಆಜ್ಞೆ ಮಾತ್ರ ನಡೆಯುತ್ತದೆ ಎಂದು ನಂಬುವುದು, ಅಲ್ಲಾಹನ ಬಯಕೆಗೆ ವಿರುದ್ಧವಾಗಿ ಜಗತ್ತಿನಲ್ಲಿ ಏನೂ ನಡೆಯುವುದಿಲ್ಲ. ಸರ್ವ ಕೆಡಕು, ಒಳಿತು ಹಾಗೂ ಸನ್ಮಾರ್ಗ, ದುರ್ವರ್ಗಕ್ಕೆ ಒಂದು ನಿಯಮವಿದೆ. ಅದನ್ನು ಆತ ಮೊದಲೇ ಮಾಡಿದ್ದಾನೆ. ಎದುರಿಸುವ ಸಂಕಷ್ಟ ಮತ್ತು ಪರೀಕ್ಷೆಗಳೆಲ್ಲವೂ ಅವರ ಪ್ರಭುವಿನ ಆಜ್ಞೆ ಹಾಗೂ ಮುಂಚಿತವಾಗಿಯೇ ತೀರ್ವನವಾದ ನಿಯಮಗಳಿಗೆ ಅನುಗುಣವಾಗಿ ಬರುತ್ತವೆ ಎಂದು ಬಾವಿಸುವುದು.

ಅಲ್ಲಾಹನ ವಿಧಿಯನ್ನು ವ್ಯಕ್ತಪಡಿಸುವ ಅನೇಕ ವಚನ(ಹದೀಸ್)ಗಳಿವೆ. ಪ್ರವಾದಿ(ಸ) ಅವರು ಹೇಳಿದ ಮಾತುಗಳನ್ನು ಅಲೀ(ರ) ಅವರು ಪುನರುಚ್ಚರಿಸುತ್ತಾರೆ. ‘ನಿಮ್ಮಲ್ಲಿ ಪ್ರತಿಯೊಬ್ಬನ ಸ್ವರ್ಗ ಹಾಗೂ ನರಕದ ತೀರ್ವನವಾಗಿಬಿಟ್ಟಿದೆ’. ಆಗ ಅವರ ಅನುಯಾಯಿಗಳು ಕೇಳಿದರು, ‘ಹಾಗಾದರೆ ನಾವೇಕೆ ನಮ್ಮ ಬಗೆಗಿನ ನಿರ್ಣಯವನ್ನು ಕಾರಣವನ್ನಾಗಿಟ್ಟುಕೊಂಡು ಕರ್ಮ ಮಾಡುವುದನ್ನು ಬಿಟ್ಟುಬಿಡಬಾರದು?’.

ಪ್ರವಾದಿ(ಸ) ಹೇಳಿದರು, ಇಲ್ಲ ನೀವು ಕರ್ಮ ಮಾಡಿರಿ, ಏಕೆಂದರೆ ಪ್ರತಿಯೊಬ್ಬರಿಗೂ ಅವನು ಯಾವುದಕ್ಕಾಗಿ ಸೃಷ್ಟಿಸಲ್ಪಟ್ಟಿರುವನೋ ಅದರ ತಾಫಿಖ್(ಅನುಗ್ರಹ) ಲಭಿಸುವುದು. ಸೌಭಾಗ್ಯವಂತನಿಗೆ ಸ್ವರ್ಗಕ್ಕೆ ಅರ್ಹವಾದ ಕಾರ್ಯಗಳನ್ನು ಮಾಡುವ ಅನುಗ್ರಹ ಸಿಗುವುದು, ದುರದೃಷ್ಟವಂತನಿಗೆ ನರಕಕ್ಕೆ ಯೋಗ್ಯವಾದ ಕೆಲಸಗಳನ್ನು ಮಾಡುವ ತೌಫಿಖ್ ಲಭಿಸುವುದು. ಯಾರು ಅಲ್ಲಾಹನ ದಾರಿಯನ್ನು ಅವಲಂಬಿಸಿದನೋ ಅವನಿಗೆ ಉತ್ತಮ ಜೀವನದ(ಸ್ವರ್ಗದ) ಅನುಗ್ರಹ ನೀಡುವೆವು. ಮತ್ತು ಯಾರು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದರಲ್ಲಿ ಜಿಪುಣತೆ ತೋರಿದನೋ, ಅಲ್ಲಾಹನ ಬಗ್ಗೆ ಅಲಕ್ಷ್ಯ ಮಾಡಿದನೋ ಮತ್ತು ಶ್ರೇಷ್ಠ ಜೀವನವನ್ನು ನಿರಾಕರಿಸಿದನೋ ನಾವು ಆತನಿಗೆ ಕಷ್ಟದ ಜೀವನ(ನರಕವನ್ನು) ಅನುಗ್ರಹಿಸುವೆ.

ಅಂದರೆ ಆತನಿಗೆ ನರಕದ ಮಾರ್ಗವನ್ನು ಸುಲಭಗೊಳಿಸುವೆವು. ತನ್ನ ಕೆಟ್ಟ ಕಾರ್ಯಗಳಿಗಾಗಿ ಆತ ನರಕವನ್ನು ಪ್ರವೇಶಿಸುವನು. ಮನುಷ್ಯ ಯಾವ ಕಾರ್ಯಗಳಿಗಾಗಿ ಸ್ವರ್ಗಕ್ಕೆ ಹೋಗುವನು ಅಥವಾ ನರಕಕ್ಕೆ ಹೋಗುವನು ಎಂಬುದು ಇಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಯಾವ ಮಾರ್ಗದಲ್ಲಿ ಹೋಗಬೇಕೆಂಬ ಆಯ್ಕೆಯ ಸ್ವಾತಂತ್ರ್ಯ ಮಾನವನಿಗೆ ಬಿಟ್ಟಿದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net