

ಚಿತ್ರದುರ್ಗ: ( Karnataka Boy Married America Girl ) ಐದಾರು ವರ್ಷದಿಂದ ಚಿತ್ರದುರ್ಗದ ಹುಡುಗನನ್ನು ಪ್ರೀತಿಸುತ್ತಿದ್ದ ಅಮೆರಿಕಾದ ಯುವತಿ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚಿತ್ರದುರ್ಗದ ಅಭಿಲಾಷ್ ಹಾಗೂ ಅಮೆರಿಕಾ ಮೂಲದ ಕೆಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಯಾಗಿದ್ದಾರೆ. ಅಭಿಲಾಷ್ ಅಮೆರಿಕಾದಲ್ಲಿ BNY ಬ್ಯಾಂಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಕೆಲ್ಲಿ ಅಮೆರಿಕಾ ಮೂಲದ ಹೆಲ್ತ್ ಕೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.
ಅಮೆರಿಕಾದಲ್ಲೇ ಇದ್ದ ಇಬ್ಬರ ಮಧ್ಯೆ ಕೋವೀಡ್ ಸಂದರ್ಭದಲ್ಲಿ ಆಗಿದ್ದ ಪರಿಚಯ ನಂತರ ಪ್ರೀತಿಯಾಗಿದೆ. ಈಗ ಕುಟುಂಬಸ್ಥರ ಸಮುಖದಲ್ಲಿ ಭಾರತೀಯ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೆಲ್ಲಿ ಭಾರತೀಯ ನಾರಿಯಂತೆ ಸೀರೆಯಲ್ಲಿ ಪುಲ್ ಮಿಂಚಿದರು. ಅವರ ಫ್ಯಾಮಿಲಿಯವರು ಸೀರೆ ಉಟ್ಟಿದ್ದು ಮತ್ತು ಪಂಚೆ ಹಾಗೂ ಮೈಸೂರು ಪೇಟ ಧರಿಸಿದ್ದು ವಿಶೇಷವಾಗಿತ್ತು. ಇನ್ನೂ ಈ ವೇಳೆ ನವ ವಿವಾಹಿತೆ ಕೆಲ್ಲಿ ಕನ್ನಡದಲ್ಲೇ ಮಾತ್ನಾಡುವ ಮೂಲಕ ಎಲ್ಲರ ಮನ ಗೆದ್ದಳು. ಈ ಮದುವೆ ಎರಡು ಕುಟುಂಬ ಮಾತ್ರವಲ್ಲದೇ ಎರಡು ದೇಶಗಳ ವಿಭಿನ್ನ ಸಂಸ್ಕೃತಿಯನ್ನ ಬೆಸೆದಿದೆ.